ರಾಯಚೂರು ಜಿಲ್ಲೆಯಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಗುಣಮಟ್ಟ, ಕೂಡು ರಸ್ತೆ ನಿರ್ಮಾಣ ,ಭೂ ಸ್ವಾಧೀನ ಸೇರಿದಂತೆ ಇತರೆ ಸಮಸ್ಯೆಗಳ ನಿವಾರಣೆಗೆ ಶೀಘ್ರದಲ್ಲಿ ಬೆಂಗಳೂರಿನಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸುವದಾಗಿ ಲೋಕೊಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳೆ ಹೇಳಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಲೋಕೋಪಯೋಗಿ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೇಂದ್ರ ಸರ್ಕಾರ ರಸ್ತೆ ನೀಲ ನಕ್ಷೆ ಅಂತಿಮಗೊಳಿಸುತ್ತದೆ. ಅಲೈಮೆಂಟ್ ಬದಲಾವಣೆ ಮಾಡುವ ಅವಕಾಶ ರಾಜ್ಯ ಸರ್ಕಾರಕ್ಕೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕಾಮಗಾರಿ ಸಮಸ್ಯೆಗಳ ನಿವಾರಣಗೆ ಬೆಂಗಳೂರಿನಲ್ಲಿ ಸಭೆ ನಡೆಸಿ ಪರಿಹಾರ ಕಂಡುಕೊಳ್ಳೊಣ್ಣ ಎಂದರು.
ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ ನೀರಾವರಿ ಪ್ರದೇಶದಲ್ಲಿ ರಸ್ತೆ ನಿರ್ಮಿಸುವಾಗ ಬಿಟ್ಟಿ ನಿರ್ಮಾಣ ಹಂತದಲ್ಲಿ ಜಮೀನು ಹೋಗಲು ರಸ್ತೆ ನಿರ್ಮಿಸಬೇಕು. ಮಳೆಗಾಲ ಪ್ರಾರಂಭವಾಗಿದ್ದರಿಂದ ರಸ್ತೆಗೆ ಬಳಸುವ ಮಣ್ಣು ತಾಂತ್ರಿಕವಾಗಿ ಬಳಕೆ ಸಾಧ್ಯವೆಂಬುದನ್ನು ಪರಿಶೀಲಿಸಬೇಕೆಂದರು. ಸಿಂಧನೂರಿನಿಂದ ಬೂದಗುಂಪು ಕ್ರಾಸವರೆಗೆ ರಸ್ತೆ ನಿರ್ಮಿಸಲು ಕೇಂದ್ರಕ್ಕೆಪ್ರಸ್ತಾವನೆ ಸಲ್ಲಿಸಬೇಕೆಂದರು.
ಕಲ್ಮಲಾದಿಂದ ಸಿಂಧನೂರು ರಸ್ತೆ 600 ಕೋಟಿ ರೂ ವೆಚ್ಚದಲ್ಲಿ ಕೈಗೆತ್ತಿಕೊಂಡಿದ್ದು 30 ಕಿಮಿ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ. ಮೂರು ವರ್ಷ ಕಾಲಮಿತಿಯಲ್ಲಿ 12 ವರ್ಷ ನಿರ್ವಹಣೆ ಗುತ್ತಿಗೆ ನೀಡಲಾಗಿದೆ ಎಂದು ರಸ್ತೆ ಅಭಿವೃದ್ದಿ ನಿಗಮದ ಅಭಿಯಂತರರ ಮುರುಳಿಧರ ಸಭೆಗೆ ತಿಳಿಸಿದರು. ಹೆದ್ದಾರಿ ಕಾಮಗಾರಿಗೆ ಐದು ಹಂತದಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ನಡೆಸಲಾಗಿದೆ ಎಂದು ಭೂ ಸ್ವಾಧೀನ ಅಧಿಕಾರಿ ಶೃತಿ ಪಾಟೀಲ್ ಮಾಹಿತಿ ನೀಡಿದರು.
ಗ್ರಾಮೀಣ ಶಾಸಕ ದದ್ದಲ ಬಸನಗೌಡ ಮಾತನಾಡಿ, ಕಾಮಗಾರಿಯಲ್ಲಿ ಸಾರ್ವಜನಿಕರಿಗೆ ರಸ್ತೆ ಮಧ್ಯೆ ವಾಹನ ನಿಲುಗಡೆಯಾಗಿ ಅಪಘಾತ ಹೆಚ್ಚಳವಾಗಲು ಕಾರಣವಾಗಿದ್ದು ವಾಹನ ನಿಲುಗಡೆಗೆ ಪ್ರತ್ಯೇಕ ಭೂ ಸ್ವಾಧೀನ ಪ್ರಕ್ರಿಯೆ ನಡೆಸಬೇಕು. ರೈತರು ಜಮೀನುಗಳಿಗೆ ಹೋಗಲು ಸಾಧ್ಯವಾಗದೇ ಇರುವದರಿಂದ ಕೂಡು ರಸ್ತೆ ನಿರ್ಮಿಸಬೇಕೆಂದರು. ಕುರ್ಡಿ, ಹೋಕ್ರಾಣಿ, ಸಾಥ್‌ಮೈಲ್ ಕ್ರಾಸ್ ಸೇರಿದಂತೆ ರಸ್ತೆ ವ್ಯಾಪ್ತಿಯಲ್ಲಿ ಬಸ್ ನಿಲುಗಡೆ ವ್ಯವಸ್ಥೆ ಮಾಡಬೇಕೆಂದರು.
ಶಾಸಕ ಡಾ.ಶಿವರಾಜ ಪಾಟೀಲ್ ಮಾತನಾಡಿ, ಹೆದ್ದಾರಿ ರಸ್ತೆಯನ್ನು ನಿರ್ಮಿಸಲಾಗಿದೆ. ಆದರೆ ರೈತರು ಜಮೀನುಗಳಿಗೆ ಹೋಗಲು ಕೂಡು ರಸ್ತೆ ನಿರ್ಮಿಸಿಲ್ಲ. ಜಮೀನಿನಿಂದ ಎತ್ತರದಲ್ಲಿ ರಸ್ತೆ ನಿರ್ಮಿಸಲಾಗಿದೆ. ಜನರಿಗೆ ತೀವ್ರ ತೊಂದರೆಯಾಗುತ್ತಿದೆ . ರಸ್ತೆ ನಿಗಮದ ಅಭಿಯಂತರ ಮುರುಳಿದರ ಮಾಹಿತಿ ನೀಡಿ ರಸ್ತೆಯನ್ನು ನೂರು ವೇಗದಲ್ಲಿ ನಿರ್ಮಿಸಲಾಗಿದೆ. ಐಆರ್‌ಸಿ ನಿಯಮಗಳ ಅನ್ವಯ ರಸ್ತೆ ನಿಮ್ರಿಹ ದೆ. ಗುಣಮಟ್ಟದ ಪರೀಕ್ಷೆ ನಡೆಸಿ ಮಣ್ಣಿನ ಗುಣಮಟ್ಟ ಅಳೆದು ಬಳಕೆ ಮಾಡಲಾಗಿದೆ ಎಂದರು.
ಸಂಸದ ಜಿ.ಕುಮಾರ ನಾಯಕ ಮಾತನಾಡಿ, ಹುನುಗುಂದ ರಾಯಚೂರು ಹೆದ್ದಾರಿ ಕಾಮಗಾರಿ ವೇಗ ಪಡೆಯುತ್ತಿಲ್ಲ. ಕಾಮಗಾರಿ ನಿರ್ವಹಿಸುವಾಗ ಇರುವ ಸಮಸ್ಯೆಗಳ ಪರಿಹರಿಸಿಕೊಂಡು ಗುಣಮಟ್ಟಕ್ಕೆ ಆಧ್ಯತೆ ನೀಡಬೇಕು. ಪ್ಯಾಕೇಜ್ 7 ರಲ್ಲಿ ಅಲೈಮೆಂಟ್ ಸಮಸ್ಯೆಯಿದೆ. ಲಿಂಗಸೂಗೂರು ಸಿರವಾರ ರಸ್ತೆಯಲ್ಲಿ 200 ಖಾಸಗಿ ಲೇಔಟ್‌ಗಳು ನೊಂದಣಿ ಮಾಡಿಸಲಾಗಿದೆ. ಲ್ಯಾಂಡ್ ಮಾಫಿಯಾ ತಡೆಯಲು ಕ್ರಮವಾಗಬೇಕೆಂದು ಎಂದರು.
ಈ ಸಂದರ್ಭದಲ್ಲಿ ಸಚಿವ ಎನ್.ಎಸ್.ಬೋಸರಾಜ, ಶಾಸಕರುಗಳಾದ ಬಸನಗೌಡ ತುರ್ವಿಹಾಳ, ಹಂಪನಗೌಡ ಬಾದರ್ಲಿ, ಡಾ.ಶಿವರಾಜ ಪಾಟೀಲ್, ಹಂಪಯ್ಯ ನಾಯಕ, ಎ.ವಸಂತ ಕುಮಾರ,ಡಿಸಿ ನಿತೀಶ್ ಕೆ. ಇದ್ದರು.
ದೇವದುರ್ಗ ಶಾಸಕಿ ಕರಿಯಮ್ಮ ನಾಯಕಿ ಮಾತನಾಡಿ, ರಾಯಚೂರಿನಿಂದ ತಿಂತಿಣಿ ಬ್ರಿಜ್‌ಗೆ ಹೋಗುವ
ರಸ್ತೆಯಲ್ಲಿ ಎರಡು ಟೋಲ್ ಗೇಟ್ ಅಳವಡಸಿರುವ ಅವೈಜ್ಞಾನಿಕವಾಗಿದ್ದು ಕೂಡಲೇ ಮುಚ್ಚಬೇಕೆಂದು ಒತ್ತಾಯ ಮಾಡಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕಿ ಪುತ್ರನಿಂದ ಟೋಲ್ ಗೇಟ್ ನೌಕರರ ಮೇಲೆ ಹಲ್ಲೆ ಮಾಡಿರುವ ಆರೋಪದಡಿ ಗಬ್ಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರಿಂದ ಪ್ರಖರಣವನ್ನು ಮರೆ ಮಾಚಲು ಪ್ರಕರಣವನ್ನು ರದ್ದು ಮಾಡಿ, ಕಾನೂನು ಹೋರಾಟ ನಿಲ್ಲಿಸುವಂತೆ ಅಂಗಲಾಚಿದರು.