ಜಿಲ್ಲೆ

ಮೋದಿಯಿಂದ ದೇಶದ ಪ್ರಗತಿ

ದತ್ತಾತ್ರೇಯ ಪಿ ಕುಲಕರ್ಣಿ

ತುಬಚಿ : ಭಾರತ ದೇಶ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿಸುವತ್ತ ಮುನ್ನುಗ್ಗುತ್ತಿರುವ ಧೀಮಂತ ನಾಯಕ ಪ್ರಧಾನ ಮಂತ್ರಿ ಪ್ರಧಾನ ನರೇಂದ್ರ ಮೋದಿ ಎಂದು ಎಪಿಎಂಸಿ ಮಾಜಿ ಅಧ್ಯ ಸುರೇಶಗೌಡ ಪಾಟೀಲ ಹೇಳಿದರು.ಜಮಖಂಡಿ ತಾಲೂಕಿನ ತುಬಚಿ ಗ್ರಾಮದಲ್ಲಿ ಬುಧವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹುಟ್ಟು ಹಬ್ಬದ ಪ್ರಯುಕ್ತ ಶಿವಲಿಂಗೇಶ್ವರ ಕತೃಗದ್ದುಗೆಗೆ ಅಭಿಷೇಕ ಹಾಗೂ ಪೂಜಾ ಕೈಂಕರ್ಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆಪರೇಷನ ಸಿಂಧೂರ ಸೇನಾ ಕಾರ್ಯಾಚರಣೆ ಮೂಲಕ ದೇಶದ ಯುದ್ಧ ಸಾಮರ್ಥ್ಯ ವಿಶ್ವ ಮಟ್ಟದಲ್ಲಿ ಸಾಬೀತುಪಡಿಸಿದ ಹೆಮ್ಮೆಯ ಪ್ರಧಾನಿ ಎಂದು ಬಣ್ಣಸಿದರು.

ಬಾಗಲಕೋಟೆ ಬಿಜೆಪಿ ಕಿಸಾನ ಟಕದ ಉಪಾಧ್ಯ ಶಿವಲಿಂಗಪ್ಪ ಕುಂಬಾರ ಮಾತನಾಡಿ, ಭಾರತವು ವಿಶ್ವಗುರುವಾಗಬೇಕು, ದೇಶ ತನ್ನ ಹಿಂದಿನ ವೈಭವ ಮರಳಿ ಪಡೆಯಬೇಕು ಹಾಗೂ ಹಲವು ಯೋಜನೆ ರೂಪಿಸಿ ಎಲ್ಲಾ ಆಯಾಮಗಳಲ್ಲಿ ದೇಶ ಬಲಿಷ್ಠ ಮಾಡಲು ಸರ್ವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಕಳೆದ 12 ವರ್ಷಗಳ ಹಿಂದೆ ದೇಶದ ಆಡಳಿತ ಚುಕ್ಕಾಣಿ ಹಿಡಿದ ಮೋದಿ ಅವರು ಇದೀಗ 75 ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವುದು ದೇಶದ ಜನರಲ್ಲಿ ಸಂಭ್ರಮ ಮೂಡಿಸಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಬಸಯ್ಯ ಮಠದ, ದುಂಡಪ್ಪ ಬಿರಾದಾರ, ನಿಂಗಪ್ಪ ಬೋರಾಳ, ಧರೆಪ್ಪ ಸಿಂಧೂರ, ರಾಜುಗೌಡ ಪಾಟೀಲ, ಅಣ್ಣಯ್ಯ ಅಡಳ್ಳಿಮಠ, ಅಪ್ಪುಗೌಡ ಪಾಟೀಲ, ರಾಚಯ್ಯ ಕರಡಿಮಠ, ಬಸವರಾಜ ಪಾಟೀಲ, ರಾಜು ಬೋರ್ಯಾಳ, ತುಕ್ಕಪ್ಪ ಹಿಡಕಲ, ರಮೇಶ ಕುರಿ, ಮಾಣಿಕಪ್ರಭು ಬಿರಾದಾರ, ಪ್ರಕಾಶ ತೇಲಿ, ಸಾಗರಗೌಡ ಪಾಟೀಲ, ಗಿರಮಲಗೌಡ ಪಾಟೀಲ, ಸಿದ್ದನಗೌಡ ಬಿ.ಪಾಟೀಲ, ಸಂಗಮೇಶ ಬಿ ಪಾಟೀಲ, ಶ್ರೀಶೈಲ್​ ಮಠದ, ಬಾಬು ಬೋರಾಳ, ಗುರುಬಾಳು ಕಿತ್ತೂರು ಇದ್ದರು. ಕಿರಣ ಹೋನವಾಡ ಸ್ವಾಗತಿಸಿ ನಿರೂಪಿಸಿದರು.

ಚಿತ್ರರ್ಶಿಷಿಕೆ:

ತುಬಚಿ&17&1:

ಜಮಖಂಡಿ ತಾಲೂಕಿನ ತುಬಚಿ ಗ್ರಾಮದಲ್ಲಿ ಮೋದಿ ಹುಟ್ಟು ಹಬ್ಬದ ಪ್ರಯುಕ್ತ ಶಿವಲಿಂಗೇಶ್ವರ ಕತೃ ಗದ್ದುಗೆಗೆ ಅಭಿಷೇಕ ಸಲ್ಲಿಸಿ ಸಿಹಿ ಹಂಚಿ ಸಂಭ್ರಮಿಸಿದರು.