ಜಿಲ್ಲೆ

ಸಾಂಸ್ಕೃತಿಕ ಹಬ್ಬ ವಾರಿಧಿ 14ಕ್ಕೆ ಮುಂದೂಡಿಕೆ

Dharwada - Basavaraj Idli

ಹುಬ್ಬಳ್ಳಿ: ನಗರದ ಗೋಕುಲ ರಸ್ತೆಯ ಪ್ರಿಯದರ್ಶಿನಿ ಕಾಲನಿಯಲ್ಲಿರುವ ಎನ್.ಎಲ್.ಇ. ಸೊಸೈಟಿ ಡಾ. ಆರ್.ಬಿ. ಪಾಟೀಲ್ ಮಹೇಶ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತರಶಾಲಾ ವಿದ್ಯಾರ್ಥಿಗಳ ಸಾಂಸ್ಕೃತಿಕ ಹಬ್ಬ "ವಾರಿಧಿ'ಯನ್ನು ಡಿ. 11ರ ಬದಲಾಗಿ ಡಿ. 14ಕ್ಕೆ ಮುಂದೂಡಲಾಗಿದೆ.

ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ನಿಧನದ ನಿಮಿತ್ತ ಶೋಕಾಚರಣೆ ಇರುವದರಿಂದ ಈ ಬದಲಾವಣೆ ಮಾಡಲಾಗಿದೆ.

ವಾರಿಧಿ 4.0 ಕಾರ್ಯಕ್ರಮದಲ್ಲಿ ಭಾಗವಹಿಸುವ ಶಾಲೆ ತಂಡಗಳು ಡಿ. 14ರಂದು ಬೆಳಗ್ಗೆ 8ಕ್ಕೆ ಆಗಮಿಸಬೇಕೆಂದು ಪ್ರಾಚಾರ್ಯ ರಾಮಮೋಹನ್ ಎಚ್.ಕೆ. ಪ್ರಕಟಣೆಯಲ್ಲಿ ಕೋರಿದ್ದಾರೆ.