ಜಿಲ್ಲೆ

ಇಂದು ಶ್ರೀ ಜಯತೀರ್ಥರ ಆರಾಧನಾ ಮಹೋತ್ಸವ

ಮಂಜುನಾಥ ಕೋಳಿಗುಡ್ಡ


ಬೆಳಗಾವಿ : ಇಲ್ಲಿಯ ರೈಲ್ವೆ ಮೇಲ್ಸೇತುವೆ ಬಳಿಯ ವಿದ್ಯಾ ವಿಹಾರ ವಿದ್ಯಾಪೀಠ, ಶ್ರೀ ರಾಘವೇಂದ್ರ ಸ್ವಾಮಿಗಳ ನವ ವೃಂದಾವನದಲ್ಲಿ ಜು.7 ರಂದು ಶ್ರೀ ಜಯತೀರ್ಥರ ಆರಾಧನಾ ಮಹೋತ್ಸವ ನಡೆಯಲಿದೆ.  
ವಿಶೇಷ ಪೂಜೆ, ಪಂಚಾಮೃತ, ವಿಶೇಷ ಅಲಂಕಾರ, ಭಜನೆ, ಪಾರಾಯಣ, ಅರ್ಚನೆ, ಪ್ರವಚನ, ಮಹಾಪ್ರಸಾದ ಜರುಗುವುದು. ಶ್ರೀ ಜಯತೀರ್ಥರ ಆರಾಧನಾ ಮಹೋತ್ಸವದಲ್ಲಿ  
ಪಾಲ್ಗೊಂಡು ಶ್ರೀ ಗುರುಗಳ ಅನುಗ್ರಹಕ್ಕೆ ಪಾತ್ರರಾಗುವಂತೆ ಶ್ರೀಮಠದ ಪ್ರಕಟಣೆ ತಿಳಿಸಿದೆ.