ಚಿಕ್ಕೋಡಿ:ವರದಿಗಾರರ ಸುದ್ದಿಗಳು ಸಮಾಜ ಒಪ್ಪುವಂತಿರಬೇಕು ಸಂತೋಷಪಡುವಂತಿರಬೇಕು ಎಂದು ೭ ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಎಸ್.ಎಲ್.ಚವ್ಹಾಣ ಹೇಳಿದರು
ಚಿಕ್ಕೋಡಿ ಪಟ್ಟಣದ ಡೈಟ್ ಸಭಾಭವನದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ,ಪ್ರೇಸ್ ಕ್ಲಬ್ ಚಿಕ್ಕೋಡಿ ಸಹಯೋಗದಲ್ಲಿ ಹಮ್ಮಿಕೊಂಡ ಪತ್ರಿಕಾ ದಿನಾಚರಣೆ ಹಾಗೂ ಸದಸ್ಯತ್ವ ಕಾರ್ಡ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ,ವರದಿಗಾರರು ಸತ್ಯಾಸತ್ಯತೆ ಅರಿತು ನೇರ,ದಿಟ್ಟ, ನೈಜ್‌ತೆಯ ವರದಿಗಾರಿಕೆಯನ್ನು ಮಾಡಬೇಕು ಎಂದರು.
ಐಎಎಸ್ ಶ್ರೇಣಿಯ ಉಪವಿಭಾಗಧಿಕಾರಿ ಮಾಧವ ಗಿತ್ತೆ ಮಾತನಾಡಿ, ಪತ್ರಕರ್ತರು ಕಾನೂನು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಬೇಕು.ಸತ್ಯನಿಷ್ಠೆಯ ವರದಿಗಾರಿಕೆಯನ್ನು ಮಾಡಬೇಕು. ಪತ್ರಕರ್ತರು ಒಳ್ಳೆಯ ರೀತಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಅವರ ಮೇಲೆ ಹೆಚ್ಚಿನ ಜವಾಬ್ದಾರಿ ಇರುತ್ತದೆ ಎಂದರು.
ಚಿಕ್ಕೋಡಿಯಲ್ಲಿ ಪತ್ರಕರ್ತರ ಸಲುವಾಗಿ ಕಚೇರಿ ಜೊತೆಗೆ ಪತ್ರಿಕಾಭವನ ನಿರ್ಮಿಸಲು ಸೂಕ್ತ ಜಾಗೆ ನೀಡುವುದಾಗಿ ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಚಿಕ್ಕೋಡಿಯ ಡಯಟ್ ಪ್ರಾಚಾರ್ಯ ಮೋಹನ ಜೀರಗಿಹಾಳ ಮಾತನಾಡಿ, ಈ ಹಿಂದೆ ಪತ್ರಕರ್ತರೂ ಜಾಣರಿದ್ದರು, ಓದುಗರು ಜಾಣರಿದ್ದರು. ಆದ್ರೆ ಇದೀಗ ಅಂತವರ ಸಂಖ್ಯೆ ಶೇ ೮೦ ರಷ್ಟು ಮಾತ್ರ ಇದೆ. ಪತ್ರಿಕೆಗೆ ಸಂಪಾದಕೀಯ ಬಹಳ ಮುಖ್ಯವಾಗಿರುತ್ತದೆ. ಇಡೀ ಪತ್ರಿಕೆಯು ಒಂದು ವಿಶ್ವ ಕೋಶ ಇದ್ದಂತೆ. ಹಾಗಾಗಿ ಪತ್ರಿಕೆಗಳನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ನಮ್ಮೆಲ್ಲರದ್ದಾಗಿದೆ" ಎಂದರು.
ಸAದರ್ಭದಲ್ಲಿ ಡಿವೈಎಸ್ಪಿ ಬಸವರಾಜ ಯಲಿಗಾರ,ತಹಶೀಲ್ದಾರ ಚಿದಂಬರ ಕುಲಕರ್ಣಿ, ಪತ್ರಿಕೋದ್ಯಮ ಉಪನ್ಯಾಸಕ ಸದಾಶಿವ ಹಾದಿಮನಿ,ಪತ್ರಕರ್ತರಾದ ವಿರುಪಾಕ್ಷಿ ಕವಟಗಿ, ಸುಭಾಷ ದಲಾಲ, ಮಹಾದೇವ ಪೂಜೇರಿ,ಕಾಶಿನಾಥ ಸುಳಕುಡೆ,ಸಂತೋಷ ಕಾಮತ,ಮಹಾವೀರ ಚಿಂಚಣೆ,ಸAಜೀವ ಕಾಂಬಳೆ,ಲೋಹಿತ ಶಿರೋಳ,ಡಿ.ಕೆ.ಉಪ್ಪಾರ,ಸುಧೀರ ಕುಂಭೋಜಕರ,ಮಹಾಂತೇಶ ಕುರಬೇಟ ಇತರರಿದ್ದರು.