ನಂದಗುಡಿ : ಕೃಷಿಯೊಂದಿಗೆ ಹೈನುಗಾರಿಕೆ ಅಭಿವೃದ್ಧಿಪಡಿಸಿಕೊಂಡರೆ ಅಧಿಕ ಲಾಭ ಗಳಿಸಿ, ಬದುಕಿನಲ್ಲಿ ಸ್ಥಿರತೆ ಕಾಪಾಡಿಕೊಳ್ಳಬಹುದು ಎಂದು ಒಕ್ಕಲಿಗರ ಸಂದ ನಿರ್ದೇಶಕ ಬಿ.ವಿ.ರಾಜಶೇಖರಗೌಡ ಹೇಳಿದರು.
ಹೊಸಕೋಟೆ ತಾಲೂಕು ನಡುವಿನಪುರ ಶ್ರೀ ಅಂಜನೇಯಸ್ವಾಮಿ ಸಮುದಾಯ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಹಾಲು ಉತ್ಪಾದಕರ ಸಹಕಾರ ಸಂದ 2024&25ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.
ರೈತರು ಆರ್ಥಿಕ ಸದೃಢತೆ ಸಾಧಿಸಲು ಹೈನುಗಾರಿಕೆ ಸಹಕಾರಿಯಾಗಿದೆ. ಉತ್ಪಾದಕರೆಲ್ಲರೂ ಗುಣಮಟ್ಟದ ಹಾಲು ಸರಬರಾಜು ಮಾಡಿದರೆ ಸಂವೂ ಪ್ರಗತಿಯತ್ತ ಸಾಲಗಲಿದೆ ಎಂದು ತಿಳಿಸಿದರು. ಬಮುಲ್ ಹೊಸಕೋಟೆ ಶಿಬಿರದ ಸಹಾಯಕ ವ್ಯವಸ್ಥಾಪಕ ಕೆ.ಶ್ರೀರಾಮ್ ಮಾತನಾಡಿ, ಬಮುಲ್ನಿಂದ ರೋಗ ನಿರೋಧಕ ಶಕ್ತಿಯ ಖನಿಜ ಮಿಶ್ರಣವನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ವರ್ಷಕ್ಕೆ 2 ಬಾರಿ ಜಂತುಹುಳ ಔಷಧ, ಕಾಲುಬಾಯಿ ರೋಗ ಚಿಕಿತ್ಸೆ ಮಾಡಿಸಬೇಕು. ರಾಸುಗಳಿಗೆ ವಿಮಾ ಸೌಲಭ್ಯ ದೊರೆಯಲಿದೆ. ರಾಸುಗಳಿಗೆ ಕಾಯಿಲೆ ಬಂದಾಗ ನುರಿತ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ನೀಡಿದರೆ ಉತ್ತಮ ಎಂದರು.
ಸಂದ ಅಧ್ಯಕ್ಷ ವಿ. ಮುನಿರಾಜು (ರಾಜಣ್ಣ) ಮಾತನಾಡಿ, ಸಂವು 2024&25ನೇ ಸಾಲಿನಲ್ಲಿ 11.91 ಲಕ್ಷ ರೂ. ವ್ಯಾಪಾರ ಲಾಭದಲ್ಲಿ 5.74 ಲಕ್ಷ ರೂ.ಗಳ ನಿವ್ವಳ ಲಾಭ ಗಳಿಸಿ, ರೈತರಿಗೆ ಶೇ. 2.75 ಬೋನಸ್ ವಿತರಿಸಲು ಕ್ರಮ ವಹಿಸಲಾಗುವುದು ಎಂದರು.
ಸಂಕ್ಕೆ ಹೆಚ್ಚು ಹಾಲು ಪೂರೈಸಿದ ಎನ್.ಟಿ.ಶ್ರೀನಿವಾಸ್, ಪ್ರಮೀಳಾ, ವಿ.ಮಂಜುನಾಥ್ ಅವರನ್ನು ಶಾಲು ಹೊದಿಸಿ, ಹಾಲಿನ ಕ್ಯಾನ್ ನೀಡಿ ಗೌರವಿಸಲಾಯಿತು. ಮಾರ್ಗ ವಿಸ್ತರಣಾಧಿಕಾರಿಗಳಾದ ಕೆ.ಆರ್.ರಮೇಶ್, ವಿನಯ್ಕುಮಾರ್, ರುನಾಥ್, ಕೃಷಿ ಅಧಿಕಾರಿ ಸೌಮ್ಯಾ, ಎಂಪಿಸಿಎಸ್ನ ಉಪಾಧ್ಯಕ್ಷ ವಿ.ಮಂಜುನಾಥ್ ನಿರ್ದೇಶಕರು ಇದ್ದರು.