* ತಟ್ಟೆಕೆರೆಯ ರೈತ ಮರಿಯಪ್ಪನಾಯಕ್‌ಗೆ ಕುಟುಂಬವೇ ಬಲ
* ಬರಗಾಲದಲ್ಲೂ ಬರಪೂರ ಬೆಳೆ ಬೆಳೆದ ಕೃಷಿಕ
*ತೋಟಗಾರಿಕಾ ಬೆಳೆಯಲ್ಲಿ ಯಶಸ್ಸು
ಚೌಕಸಂದ್ರ ಜಯರಾಮನಾಯಕ್ ಹಾರೋಹಳ್ಳಿ
ಛಲವಿದ್ದರೆ ಎಲ್ಲವೂ ಸಾಧ್ಯ ಎಂಬುದಕ್ಕೆ ಕೋವಿಡ್ ಸಂದರ್ಭದಲ್ಲಿ ಕೆಲಸ ಕಳೆದುಕೊಂಡರೂ ಧೃತಿಗೆಡದೆ ಸ್ವಗ್ರಾಮಕ್ಕೆ ಮರಳಿ, ವ್ಯವಸಾಯದಲ್ಲಿ ತೊಡಗಿದ್ದ ತಾಲೂಕಿನ ತಟ್ಟೆಕೆರೆ ಗ್ರಾಮದ ಬಳಿಯ ಲೋಕನಾಯಕನ ತಾಂಡದ ರೈತ ಮರಿಯಪ್ಪನಾಯಕ್ ಸಾಕ್ಷಿಯಂತಿದ್ದು, ಮಿಶ್ರ ಬೇಸಾಯದಲ್ಲಿ ಲಾಭ ಕಂಡುಕೊಳ್ಳುತ್ತಿದ್ದಾರೆ.
ಮದುವೆ ಮತ್ತು ಇತರ ಶುಭ ಸಮಾರಂಭಗಳಿಗೆ ಅಲಂಕಾರ ಮಾಡುವ ಹೈಬ್ರಿಡ್ ಕೃಶಾಂತಮ್ ಎಂಬ ತಳಿಯ ಹೂವುಗಳನ್ನು ಬೆಳೆಯುತ್ತಿದ್ದಾರೆ, ಕೆಂಪು ಹಳದಿ ನೀಲಿ ಸೇರಿ ಈ ತಳಿ 9 ಬಗೆಯ ಹೂವುಗಳನ್ನು ಬೆಳೆದು ಲಕ್ಷಾಂತರ ರೂ. ಸಂಪಾದನೆ ಮಾಡುತ್ತಿದ್ದಾರೆ.
ಬರಗಾಲದಲ್ಲೂ ಬರಪೂರ ಬೆಳೆ ಬೆಳೆಯುತ್ತಿದ್ದು, ತೆಂಗಿನ ಮರಗಳು, ಅಡಕೆ ಮರಗಳು, ಬೆಣ್ಣೆ ಹಣ್ಣಿನ ಮರಗಳು, ಬಾಳೆ, ಮಹಾಗನಿ ಮರಗಳು ಸೇರಿ ತಮ್ಮ ಒಟ್ಟು ಎಂಟು ಎಕರೆ ಜಮೀನಿನಲ್ಲಿ ಮಿಶ್ರ ಬೆಳೆಯನ್ನು ಬೆಳೆಯುತ್ತಿದ್ದಾರೆ. ಇದರ ಜತೆಗೆ ಪಪ್ಪಾಯ, ಮರಗೆಣಸು, ಸಿಹಿ ಗೆಣಸು, ನೆಲ್ಲಿಕಾಯಿ, ಸೀಬೆಕಾಯಿ ಹಲವು ಬೆಳೆಗಳನ್ನು ಬೆಳೆಯುತ್ತಿದ್ದಾರೆ.
ಇವರು ಬೆಳೆಯುತ್ತಿರುವ ಹೂಗಳಿಗೆ ಬೇಡಿಕೆ ಇದ್ದು, ಕರೋನಾ ಸಂದರ್ಭದಲ್ಲಿ ಮಾತ್ರ ಹೂವುಗಳು ತೋಟದಲ್ಲಿಯೇ ಕೊಳ್ಳುವವರಿಲ್ಲದೆ ನಷ್ಟವಾಯಿತು. ನಂತರದ ದಿನಗಳಲ್ಲಿ ಮತ್ತೆ ಮದುವೆ ಇನ್ನಿತರ ಸಮಾರಂಭಗಳು ಹೆಚ್ಚಾದ ಸಂದರ್ಭದಲ್ಲಿ ಹೂಗಳಿಗೆ ಮತ್ತೆ ಬೇಡಿಕೆ ಬಂದಿತು.
ಕುಟುಂಬ ಕೃಷಿಗೆ ಬೆನ್ನೆಲುಬಾಗಿ ನಿಂತಿದೆ. ಅಲ್ಲದೇ, ತಮ್ಮ ಜಮೀನಿನಲ್ಲಿ ಮಿಶ್ರ ಬೇಸಾಯ ಪದ್ಧತಿ ಅನುಸರಿಸುವ ಮೂಲಕ ಕೊಟ್ಟಿಗೆ ಗೊಬ್ಬರ, ಸಾವಯವ ಗೊಬ್ಬರಕ್ಕೆ ಒತ್ತುಕೊಟ್ಟು ರಾಸಾಯನಿಕ ಗೊಬ್ಬರವನ್ನು ಕಡಿಮೆ ಬಳಸುವ ಮೂಲಕ ಆಧುನಿಕ ಕೃಷಿ ನಡೆಸಿದ್ದಾರೆ.
ಮರಿಯಪ್ಪ ನಾಯಕ್ ಅವರು ವಾರ್ಷಿಕವಾಗಿ ಸುಮಾರು 15 ರಿಂದ 20 ಲಕ್ಷದ ರೂ. ವರೆಗೆ ಸಂಪಾದನೆ ಮಾಡುತ್ತಿದ್ದು, ವಾರ್ಷಿಕವಾಗಿ 5 ರಿಂದ 6 ಲಕ್ಷ ರೂ. ಖರ್ಚನ್ನು ಮಾಡುತ್ತಾರೆ. ಕೆಲವು ಸಂದರ್ಭದಲ್ಲಿ ಕಾರ್ಮಿಕರು ಸಿಗದೇ ಇವರ ಮನೆಯವರೇ ಎಲ್ಲ ಕೆಲಸಗಳಿಗೆ ಸಾಥ್ ನೀಡುತ್ತಿದ್ದಾರೆ.
ಒಟ್ಟಾರೆ ವ್ಯವಸಾಯ ಎಂದು ಮೂಗು ಮುರಿಯುವವರಿಗೆ ಮರಿಯಪ್ಪ ನಾಯಕ್ ಒಂದು ಪಾಠವಾಗಿದ್ದು, ತೋಟಗಾರಿಕೆ ಇಲಾಖೆ ಇವರಿಗೆ ಹಲವು ರೀತಿಯ ಮಾರ್ಗದರ್ಶನ ನೀಡಿ ಹೆಚ್ಚಿನದಾಗಿ ವ್ಯವಸಾಯ ಮಾಡುವಂತೆ ಪ್ರೇರೇಪಿಸುತ್ತಿದ್ದಾರೆ.
ಮರಿಯಪ್ಪ ನಾಯಕ್ ರೈತ
ಸಂಪರ್ಕ ಸಂಖ್ಯೆ: 97415 34983
ರಮೇಶ್, ತೋಟಗಾರಿಕೆ ಇಲಾಖೆ ಅಧಿಕಾರಿ