ನೆಲಮಂಗಲ ತಾಲೂಕಿನ ಕಳಲುಟ್ಟ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂದ ಸರ್ವ ಸದಸ್ಯರ ಸಾಮಾನ್ಯ ವಾರ್ಷಿಕ ಸಭೆಯನ್ನು ಅಧ್ಯಕ್ಷ ಬಿ.ನಾಗರಾಜು, ಉಪಾಧ್ಯಕ್ಷ ನರಸಿಂಹಮೂರ್ತಿ, ಸಿಇಒ ಕೆಂಪಯ್ಯ ಉದ್ಘಾಟಿಸಿದರು. ನಿರ್ದೇಶಕರಾದ ಬಿ.ಕೆ.ಲ್ಮಕಾಂತ್​, ಕೆ.ಎಲ್​.ನರಸಿಂಹಮೂರ್ತಿ, ಗೋವಿಂದರಾಜು, ಕೋಡಿಹಳ್ಳಿ ನರಸೇಗೌಡ, ಎಸ್​.ರಮೇಶ್​, ಕೆ.ಉಮೇಶ್​, ಗಂಗಹನುಮಯ್ಯ, ಈರಯ್ಯ, ಜಿ.ಆರ್​.ಮಂಜುಳಾ, ರತ್ನಮ್ಮ ಇದ್ದರು. 
ಜಿಲ್ಲೆ

ಕಳಲುಟ್ಟ ಸಂಕ್ಕೆ  29.61 ಲಕ್ಷ ರೂ. ಲಾಭ

ತ್ಯಾಮಗೊಂಡ್ಲು : ಸಹಕಾರಿ ಬ್ಯಾಂಕ್​ ರಾಷ್ಟ್ರೀಯ ಬ್ಯಾಂಕುಗಳಿಗಿಂತ ಹೆಚ್ಚಿನ ಸೌಲಭ್ಯ ನೀಡುತ್ತಿದ್ದು, ರೈತರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಕಳಲುಟ್ಟ ವ್ಯವಸಾಯ ಸೇವಾ ಸಹಕಾರ ಸಂದ ಅಧ್ಯಕ್ಷ ಬಿ.ನಾಗರಾಜು ಹೇಳಿದರು. ನೆಲಮಂಗಲ ತಾಲೂಕಿನ ಕಳಲುಟ್ಟ ಶ್ರೀ ಲ್ಮ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಸಂದ ಸರ್ವ ಸದಸ್ಯರ ಸಾಮಾನ್ಯ ವಾರ್ಷಿಕ ಸಭೆಯಲ್ಲಿ ಮಾತನಾಡಿದರು.

ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಕೋಳಿ, ಮೇಕೆ, ಕುರಿ ಸಾಕಣೆಗೆ ಸಾಲ ಜತೆಗೆ ಚಿನ್ನದ ಮೇಲಿನ ಸಾಲ ಸೌಲಭ್ಯ ನೀಡಲು ಪ್ರಾರಂಭಿಸಲಾಗಿದೆ. ಇ&ಸ್ಟಾಂಪ್​ನಲ್ಲಿ ಗಣನೀಯ ಸೇವೆ ನೀಡುತ್ತಿದ್ದೇವೆ ಎಂದು ಹೇಳಿದರು. ಹಸಿರುವಳ್ಳಿಯಲ್ಲಿ ಹೊಸದಾಗಿ ಗೋದಾಮು ನಿರ್ಮಿಸಿ ಕೆಳ ಅಂತಸ್ತಿನಲ್ಲಿ ನಾಲ್ಕು ಅಂಗಡಿ ಹಾಗೂ ಮೊದಲನೇ ಮಹಡಿಯಲ್ಲಿ ಕಾರ್ಯಾಲಯ ಒಳಾಂಗಣ ನಿರ್ಮಿಸಿ ಪಡಿತರ ವಿತರಣೆ ಪ್ರಾರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ರಸಗೊಬ್ಬರ, ಪಶು ಆಹಾರ ಮಾರಾಟದ ಯೋಜನೆ ಮಾಡಲಾಗಿದೆ ಎಂದರು. ಕಳಲುಟ್ಟ ವಿಎಸ್​ಎಸ್​ಎನ್​ ಸಿಇಒ ಕೆಂಪಯ್ಯ ಮಾತನಾಡಿ, ಪ್ರಸ್ತುತ 578 ರೈತರಿಗೆ 4.40ಕೋಟಿ ರೂಪಾಯಿ ಕೆಸಿಸಿ ಬೆಳೆಸಾಲ ವಿತರಿಸಲಾಗಿದೆ. 3 ಸಿಶಕ್ತಿ ಸಂಗಳಿಗೆ 6.56 ಲಕ್ಷ ರೂ. ಸಾಲ ನೀಡಲಾಗಿದೆ. 24.53 ಮದ್ಯಮಾವಧಿ ಸಾಲ, ಚಿನ್ನಾಭರಣದ ಮೇಲೆ 36.68 ಲಕ್ಷ ರೂ. ಸಾಲ ನೀಡಿದೆ. ವ್ಯಾಪಾರ ಲಾಭ 29.61 ಲಕ್ಷ ರೂ. ಅದರಲ್ಲಿ ಖರ್ಚು ಕಳೆದು 2.88 ಲಕ್ಷ ನಿವ್ವಳ ಲಾಭ ಬಂದಿದೆ.

ನೆಲಮಂಗಲ ಮತ್ತು ತ್ಯಾಮಗೊಂಡ್ಲು ಬ್ಯಾಂಕುಗಳಲ್ಲಿ ಒಟ್ಟು 58.95 ಲಕ್ಷ ಠೇವಣಿ ಇರಿಸಲಾಗಿದೆ. ಲೆಕ್ಕ ಪರಿಶೋಧಕರ ವರದಿಯಲ್ಲಿ ಸಂಕ್ಕೆ ಬಿ ದರ್ಜೆ ಸ್ಥಾನ ಸಿಕ್ಕಿದೆ ಎಂದು ಮಾಹಿತಿ ನೀಡಿದರು. ಮುಂದಿನ ಚುನಾವಣೆಯಲ್ಲಿ ಸರ್ಕಾರದ ಬೈಲಾ ಪ್ರಕಾರ 5 ವಾರ್ಷಿಕ ಸಭೆಗಳ ಪೈಕಿ 2 ಸಭೆಗಳಿಗೆ ಕಡ್ಡಾಯ ಹಾಜರಿ, ಸಹಕಾರಿ ಬ್ಯಾಂಕಿನಲ್ಲಿ 2 ವರ್ಷ ಕನಿಷ್ಠ ಹತ್ತು ಸಾವಿರ ಸಾಲ ಹಾಗೂ ಹತ್ತು ಸಾವಿರ ರೂಪಾಯಿ ವ್ಯವಹಾರ ನಡೆಸುವುದು ಕಡ್ಡಾಯ. ಅಲ್ಲದೇ ಚುನಾವಣೆಯಲ್ಲಿ ಸ್ಪರ್ಧಿಸಲು, ಮತ ಚಲಾಯಿಸಲು ಅನರ್ಹರು ಎಂದು ಹೇಳಿದರು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ 7 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಮೇಲ್ವಿಚಾರಕ ರವಿಕುಮಾರ್​, ಸಂದ ಮಾಜಿ ಅಧ್ಯಕ್ಷ ಕೆ.ಟಿ.ಬೈರೇಗೌಡ, ಬೋಜರಾಜು, ಗೋವೇನಹಳ್ಳಿ ಹನುಮಂತಯ್ಯ, ಗೂಳಾಪುರ ಗಂಗಣ್ಣ, ಕಳಲುಟ್ಟ ಗ್ರಾಪಂ ಮಾಜಿ ಅಧ್ಯಕ್ಷ ಜಿ.ಆರ್​.ಲೋಕೇಶ್​, ಹಸಿರುವಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಚನ್ನಕೃಷ್ಣ, ಗಂಗರಾಜು, ಸಿಬ್ಬಂದಿ ಗಂಗಬಸವಯ್ಯ, ನಾರಾಯಣಸ್ವಾಮಿ, ಪುಟ್ಟರಾಜು, ಜಿ.ಪಿ.ದಿವ್ಯಾ ಸದಸ್ಯರು ಇದ್ದರು.