ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದ ಸಂಘದ ಸದಸ್ಯರ ಮಕ್ಕಳಿಗೆ ಸೋಮವಾರಪೇಟೆ ಸಮೀಪದ ಶಾಂತಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ಪ್ರೋತ್ಸಾಹ ಧನದ ಚೆಕ್ ವಿತರಿಸಲಾಯಿತು. ಧರ್ಮಪ್ಪ, ದೇಶ್‌ರಾಜ್, ಜಯೇಂದ್ರ ಇದ್ದರು. 
ಜಿಲ್ಲೆ

ಶಾಂತಳ್ಳಿ ಸಹಕಾರ ಸಂಘಕ್ಕೆ 27 ಲಕ್ಷ ರೂ. ಲಾಭ

ಸೋಮವಾರಪೇಟೆ: ಶಾಂತಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಕಳೆದ ಸಾಲಿನಲ್ಲಿ 27 ಲಕ್ಷ ರೂ. ಲಾಭ ಗಳಿಸಿದ್ದು, ಸದಸ್ಯರಿಗೆ ಶೇ. 5ರಷ್ಟು ಲಾಭಾಂಶ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಧರ್ಮಪ್ಪ ತಿಳಿಸಿದರು.

ಶ್ರೀ ಕುಮಾರಲಿಂಗೇಶ್ವರ ಸಮುದಾಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು. ಸಂಘದಲ್ಲಿ ಉತ್ತಮವಾಗಿ ವ್ಯವಹಾರ ನಡೆಯುತ್ತಿದ್ದು, ಎಲ್ಲ ಸದಸ್ಯರು ತಮ್ಮ ಕೃಷಿಗೆ ಬೇಕಾದ ಗೊಬ್ಬರ, ಕ್ರಿಮಿನಾಶಕ ಮತ್ತಿತರ ವಸ್ತುಗಳನ್ನು ಸಂಘದಲ್ಲಿಯೇ ಖರೀದಿಸುವುದರಿಂದ, ಇನ್ನೂ ಹೆಚ್ಚಿನ ಲಾಭಗಳಿಸಲು ಸಾಧ್ಯ ಎಂದು ತಿಳಿಸಿದರು.

ಈಗಾಗಲೇ ಸಂಘದ ವತಿಯಿಂದ ನೂತನ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಶೀಘ್ರವಾಗಿ ಕಟ್ಟಡದ ಕಾಮಗಾರಿ ಮುಗಿಸಿ ಸದಸ್ಯರ ಬಳಕೆಗೆ ನೀಡುವಂತೆ ಸಭೆ ಆಗ್ರಹಿಸಿತು. ಬೆಟ್ಟದಳ್ಳಿ ಗ್ರಾಮದಲ್ಲಿ ಒಂದು ಶಾಖೆಯನ್ನು ಪ್ರಾರಂಭಿಸುವಂತೆ ಸದಸ್ಯರು ಸೂಚಿಸಿದರು.

ಸಭೆಯಲ್ಲಿ ಸಂಘದ ಉಪಾಧ್ಯಕ್ಷ ದೇಶ್‌ರಾಜ್, ನಿರ್ದೇಶಕರಾದ ಬಿ.ಈ. ಜಯೇಂದ್ರ, ಬಸವರಾಜು, ಕೆ.ಕೆ. ಗೋಪಾಲ್, ದಿನೇಶ್, ಚಂದ್ರಾವತಿ, ರಾಜೇಶ್, ಸೋಮಶೇಖರ್, ನಾರಾಯಣ, ಗೌರಮ್ಮ ಹಾಗೂ ಕಾರ್ಯನಿರ್ವಹಣಾಧಿಕಾರಿ ಡಿ.ಪಿ. ಜೋಯಪ್ಪ ಇದ್ದರು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನದ ಚೆಕ್ ವಿತರಿಸಲಾಯಿತು.