ಮೈಸೂರು: ನಗರದ ಸಿದ್ಧಾರ್ಥಬಡಾವಣೆಯ ಶ್ರೀ ಮಹಾವೀರ್ ಜೈನ್ ಮಹಾವಿದ್ಯಾಲಯದ 2ನೇ ತರಗತಿ ವಿದ್ಯಾರ್ಥಿ ಯು.ದಕ್ಷ್ ಕರಾಟೆಯಲ್ಲಿ ಸಾಧನೆ ಮಾಡಿದ್ದಾನೆ.
ನಗರದ ಮಹಾರಾಜ ಕಾಲೇಜಿನ ಸ್ಪೋರ್ಟ್ಸ್ ಪೆವಿಲಿಯನ್ ಜಿಮ್ನಾಷಿಯಂ ಹಾಲ್‌ನಲ್ಲಿ ಇತ್ತೀಚಿಗೆ ಆಯೋಜಿಸಿದ್ದ ಗೋಜು ವಾರಿಯರ್ಸ್ ಕಪ್-2024 ಮುಕ್ತ ರಾಷ್ಟ್ರೀಯ ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ 7 ವರ್ಷ ವಯೋಮಾನದ ಸ್ಪರ್ಧೆಯಲ್ಲಿ ಕತಾ ಮತ್ತು ಕುಮಿತೆ ವಿಭಾಗದಲ್ಲಿ ಕ್ರಮವಾಗಿ ದ್ವಿತೀಯ ಬಹುಮಾನ ಪಡೆದಿದ್ದಾನೆ.
ವಿ.ಎನ್.ಯೋಧ ಮಾರ್ಷಲ್ ಆರ್ಟ್ಸ್ ಅಕಾಡೆಮಿಯ ತರಬೇತುದಾರ ನಾಗಾಭರಣ ಅವರಿಂದ ಈತ ತರಬೇತಿ ಪಡೆದಿದ್ದಾನೆ. ಈತ ಆಲನಹಳ್ಳಿ ಬಡಾವಣೆಯ ನಿವಾಸಿ ಉಮೇಶ್ ಮತ್ತು ಪಲ್ಲವಿ ದಂಪತಿ ಪುತ್ರ.