ಪ್ರಭು ಬೇವಿನಮರದ 
ಜಿಲ್ಲೆ

ಪ್ರಾಧ್ಯಾಪಕ ಪ್ರಭು ಬೇವಿನಮರದಗೆ ಪಿಎಚ್.ಡಿ

ದತ್ತಾತ್ರೇಯ ಪಿ ಕುಲಕರ್ಣಿ

ವಿಜಯಪುರ: ನಗರದ ಬಿಎಲ್‌ಡಿಇ ಸಂಸ್ಥೆಯ ವಚನ ಪಿತಾಮಹ ಡಾ. ಪಿ.ಜಿ. ಹಳಕಟ್ಟಿ ಕಾಲೇಜ್ ಆಫ್ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರಭು ಬೇವಿನಮರದ ಅವರಿಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ಪ್ರದಾನ ಮಾಡಿ ಗೌರವಿಸಿದೆ.

ಪ್ರಭು ಬೇವಿನಮರದ ಅವರು 'ಡೆವಲಪಿಂಗ್ ಕಾಪಿ-ಮುಬ್ ಫೋರ್ಜರಿ ಡಿಟೆಕ್ಷನ್ ಆ್ಯಂಡ್ ಅಥೆನ್ಟಿಕೇಷನ್ ಟೆಕ್ನಿಕ್ಸೃ್ ಫಾರ್ ಡಿಜಿಟಲ್ ಇಮೆಜ್ಸ್' ಎಂಬ ವಿಷಯದ ಕುರಿತು ಪ್ರಬಂಧ ಮಂಡಿಸಿದ್ದರು. ಅವರಿಗೆ ಅದೇ ಕಾಲೇಜಿನ ಇನ್ಫರ್ಮೇಷನ್ ಸೈನ್ಸ್ ಆ್ಯಂಡ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಪ್ರಕಾಶ ಉಂಕಿ ಮಾರ್ಗದರ್ಶನ ನೀಡಿದ್ದರು.

ಪ್ರಭು ಬೇವಿನಮರದ ಅವರ ಶೈಕ್ಷಣಿಕ ಸಾಧನೆಗೆ ಕಾಲೇಜಿನ ನಿರ್ದೇಶಕ ಡಾ. ವಿ.ಜಿ. ಸಂಗಮ, ಉಪ ಪ್ರಾಚಾರ್ಯ ಡಾ. ಲೀನಾ ರಾಘಾ ಮತ್ತು ಡಾ. ಪಿ.ವಿ. ಮಾಳಜಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.