ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಶಿವರಾತ್ರಿ ನಮ್ಮ ಪರಂಪರೆಯ ಅವಿಭಾಜ್ಯ ಅಂಗ. ಭಾರತೀಯ ಸಂಸ್ಕೃತಿಯಲ್ಲಿ ಶಿವಸಂಸ್ಕೃತಿಯೇ ಜೀವಾಳ ಎಂದು ಸಾಹಿತಿ ಪ್ರೊ.ಬಸವರಾಜ ಕುಪ್ಪಸಗೌಡರ ಹೇಳಿದರು.
ವೀರಶೈವ ಲಿಂಗಾಯತ ಮಹಾಸಭೆಯು ಶಿವಬಸವ ನಗರದ ಲಿಂಗಾಯತ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಅಮಾವಾಸ್ಯೆ ಅನುಭಾವ ಗೋಷ್ಠಿಯಲ್ಲಿ ‘ಶಿವರಾತ್ರಿ ಆಚರಣೆ ಮತ್ತು ಶರಣರು’ ವಿಷಯ ಕುರಿತು ಮಾಡಿದರು. ಇಂದಿನ ಒತ್ತಡದ ಬದುಕಿನಲ್ಲಿ ಶಿವೋಪಾಸನೆ ಜೀವಾಮೃತವಿದ್ದಂತೆ. ನಮ್ಮ ಹೃದಯದಲ್ಲಿ ಪರಮಾತ್ಮನನ್ನು ಧಾರಣ ಮಾಡಿಕೊಳ್ಳಬೇಕಾಗಿದೆ. ಅಂತಹ ಶಿವಸತ್ಸಂಗದ ಮೂಲಕ ಬದುಕಿನ ಕಷ್ಟಗಳನ್ನು ಮರೆಯೋಣವೆಂದು ಹಲವಾರು ದೃಷ್ಟಾಂತ ಮೂಲಕ ಶಿವರಾತ್ರಿ ಮಹತ್ವ ತಿಳಿಸಿದರು.
ಸಾನ್ನಿಧ್ಯ ವಹಿಸಿದ್ದ ಕಾರಂಜಿಮಠದ ಗುರುಸಿದ್ದ ಸ್ವಾಮೀಜಿ ಆಶೀರ್ವಚನ ನೀಡಿದರು. ಪ್ರಬಂಧ ಸ್ಪರ್ಧೆ ವಿಜೇತ ಮಕ್ಕಳಿಗೆ ಪ್ರಶಸ್ತಿ ಪತ್ರ ಹಾಗೂ ಬಹುಮಾನ ವಿತರಿಸಲಾಯಿತು. ಅನಿತಾ ಮಾಲಗತ್ತಿ ವಚನ ಪ್ರಾರ್ಥನೆ ಸಲ್ಲಿಸಿದರು. ಪದ್ಮಾ ಹೊಸಕೋಟಿ ವಚನ ವಿಶ್ಲೇಷಣೆ ಮಾಡಿದರು. ಸುಧಾ ಪಾಟೀಲ ಸ್ವಾಗತಿಸಿದರು. ಶ್ವೇತಾ ಹೆದ್ದೂರಶೆಟ್ಟಿ ಪರಿಚಯಿಸಿದರು. ಮಂಜುಶ್ರೀ ಹಾವಣ್ಣನವರ ನಿರೂಪಿಸಿದರು. ವಕೀಲ ವಿ.ಕೆ.ಪಾಟೀಲ ವಂದಿಸಿದರು.
ಮಹಾಸಭೆ ಜಿಲ್ಲಾ ಘಟಕದ ಉಪಾಧ್ಯಕ್ಷೆ ಡಾ.ಗುರುದೇವಿ ಹುಲೆಪ್ಪನವರಮಠ, ರಮೇಶ ಕಳಸಣ್ಣನವರ, ಸೋಮಲಿಂಗ ಮಾವಿನಕಟ್ಟಿ, ಆರ್.ಪಿ.ಪಾಟೀಲ, ಎಂ.ವೈ. ಮೆಣಸಿನಕಾಯಿ, ಜ್ಯೋತಿ ಬದಾಮಿ, ಬಾಲಚಂದ್ರ ಬಾಗಿ, ಡಾ.ಮಹೇಶ ಗುರನಗೌಡರ, ಸರೋಜನಿ ನಿಶಾನದಾರ, ವೀಣಾ ನಾಗಮೋತಿ ಇದ್ದರು.