ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆಯ ಎನ್‌ಆರ್‌ಎಂ ಘಟಕ ಸೋಮವಾರ ಉತ್ಪಾದನೆ ಆರಂಭಿಸಿರುವುದು. 
ಜಿಲ್ಲೆ

ವಿಐಎಸ್‌ಎಲ್‌ನಲ್ಲಿ ಉತ್ಪಾದನೆ ಶುರು

ಭದ್ರಾವತಿ: ವಿಐಎಸ್‌ಎಲ್ ಕಾರ್ಖಾನೆಯ ಎನ್‌ಆರ್‌ಎಂ ಘಟಕ ಸೋಮವಾರ ಪೂಜಾ ವಿಧಿ ವಿಧಾನಗಳೊಂದಿಗೆ ಆರಂಭಗೊಂಡಿದ್ದು ಕಾರ್ಮಿಕರು ಸಂಭ್ರಮದಿಂದ ಯಂತ್ರಕ್ಕೆ ಚಾಲನೆ ನೀಡಿದರು. ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಚಾಂದ್ವಾನಿ ಸ್ಥಳದಲ್ಲಿ ಉಪಸ್ಥಿತರಿದ್ದು ಕಾರ್ಮಿಕರೊಂದಿಗೆ ಸುರಕ್ಷಿತವಾಗಿ ಕೆಲಸ ಮಾಡುವಂತೆ ಸಲಹೆ ನೀಡಿದರು. ಕಳೆದ ವಾರ ಕಾರ್ಖಾನೆಗೆ ಬಿಲಾಯ್ ಘಟಕದಿಂದ 19 ವ್ಯಾಗನ್‌ಗಳಲ್ಲಿ ಬ್ಲೂಮ್‌ಗಳನ್ನು ಸರಬರಾಜು ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸೋಮವಾರ ಎನ್‌ಆರ್‌ಎಂ ಘಟಕದಲ್ಲಿ ಉತ್ಪಾದನೆ ಆರಂಭ ಮಾಡಲಾಯಿತು. ಈ ಸಂಬಂಧ ಕಾರ್ಮಿಕರು ತಮ್ಮ ಮೊಬೈಲ್‌ಗಳಲ್ಲಿ ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ.