ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿದ್ಯಾರ್ಥಿಗಳಿಗಾಗಿ ಅಮೃತ ಆವಿಷ್ಕಾರ ವಿನೂತನ ಪ್ರಾಡಕ್ಟ್ ಲಾಂಚ್ ಕಾರ್ಯಕ್ರಮವನ್ನು ಉದ್ಯಮಿ ವಿಖ್ಯಾತ್ ಶೆಟ್ಟಿ ಉದ್ಘಾಟಿಸಿದರು.  
ಜಿಲ್ಲೆ

ಕೌಶಲ ಭರಿತ ಕ್ರಿಯೇಟಿವ್ ಶಿಕ್ಷಣ

ಇಂದಿರಾ ಎನ್ ಕೆ

ಹೆಬ್ರಿ: ಇಂದಿನ ವಿದ್ಯಾರ್ಥಿಗಳಿಗೆ ಕೌಶಲ ಭರಿತ ಕ್ರಿಯೇಟಿವ್ ಶಿಕ್ಷಣದ ಅವಶ್ಯಕತೆ ಇದೆ. ಪಠ್ಯದ ಬೋಧನೆಯೊಂದಿಗೆ ಜೀವನದ ಪಾಠ ಬೋಧಿಸಬಲ್ಲ ಪ್ರಾಯೋಗಿಕ ಶಿಕ್ಷಣದಿಂದ ಸರ್ವತೋಮುಖ ಬೆಳವಣಿಗೆ ಸಾಧ್ಯ ಎಂದು ಉದ್ಯಮಿ ವಿಖ್ಯಾತ್ ಶೆಟ್ಟಿ ಹೇಳಿದರು.

ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿದ್ಯಾರ್ಥಿಗಳಿಗಾಗಿ ಅಮೃತ ಆವಿಷ್ಕಾರ ಎಂಬ ವಿನೂತನ ಪ್ರಾಡಕ್ಟ್ ಲಾಂಚ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಜಯಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬಳಿಕ ವಿದ್ಯಾರ್ಥಿಗಳಿಂದ ಪ್ರಾಡಕ್ಟ್ ಲಾಂಚ್ ಸ್ಪರ್ಧೆ ಮತ್ತು ಮಾಡೆಲ್‌ಗಳ ಪ್ರದರ್ಶನ ನಡೆಯಿತು.

ವಾಣಿಜ್ಯ ವಿಭಾಗದ ಹಿರಿಯ ಉಪನ್ಯಾಸಕಿ ಅನುಸೂಯಾ ಮಲ್ಯ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಪ್ರದ್ಯುಮ್ನ ಸ್ವಾಗತಿಸಿ, ಆದಿತ್ಯ ಅತಿಥಿಗಳನ್ನು ಪರಿಚಯಿಸಿದರು. ಗಗನ್ ರಾಜ್ ವಂದಿಸಿದರು. ಲಹರಿ ತುಂಗಾ ನಿರೂಪಿಸಿದರು.

ಹತ್ತು ನಿಮಿಷದ ಒಂದು ಪ್ರಾಡಕ್ಟ್ ಲಾಂಚ್ ಪ್ರದರ್ಶನಕ್ಕಾಗಿ ನಿಮ್ಮ ಹತ್ತಾರು ಗಂಟೆಗಳ ಮಾಹಿತಿ ಸಂಗ್ರಹದ ಕಾರ್ಯ, ನಿಮ್ಮಲ್ಲಿ ಇಂಡಸ್ಟ್ರಿಯ ಕುರಿತು ಬಹಳಷ್ಟು ಜ್ಞಾನ ತುಂಬುತ್ತದೆ. ಈ ಜ್ಞಾನ ಬಳಸಿಕೊಂಡು ಭವಿಷ್ಯದಲ್ಲಿ ಯಶಸ್ವಿ ಉದ್ಯಮಿಗಳಾಗಿ, ಮೋದಿಯವರ ಸ್ಟಾರ್ಟಪ್ ಇಂಡಿಯಾ, ಮೇಕ್ ಇನ್ ಇಂಡಿಯಾದ ಕನಸನ್ನು ನನಸಾಗಿಸಿ.-ವಿಜಯಕುಮಾರ್ ಶೆಟ್ಟಿ ಸಂಸ್ಥೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ