ಉಡುಪಿ: ರಾಷ್ಟ್ರಶಕ್ತಿಯ ಕೇಂದ್ರ ಬಿಂದು ಕುಟುಂಬ. ಸಂಸತಿ ದೇಶದ ಆತ್ಮ. ಆದರೆ ಇಂದು ಸಂಸತಿ ಮುಸುಕಾಗಿದೆ. ವಿವಾಹ ಸಂಬಂಧಗಳು ಶಿಥಿಲವಾಗಿವೆ. ಲಿವಿಂಗ್ ಟುಗೇದರ್ ಮಾನಸಿಕತೆ ಅಪಾಯಕಾರಿಯಾಗಿದೆ. ಸಾಮಾಜಿಕ ಬದ್ಧತೆ ಇಲ್ಲದ ಜೀವದದುದ್ದಕ್ಕೂ ಬಾರದ ಸಂಗಾತಿಯಿಂದ ಜವಾಬ್ದಾರಿಯನ್ನು ನಿರೀಸಲು ಸಾಧ್ಯವಿಲ್ಲ, ಇದರಿಂದ ಕುಟುಂಬದ ತಳಹದಿ ಣಿಸುತ್ತಿದೆ. ಯುವಜನರು ಹಾದಿತಪ್ಪಿದರೆ ದೇಶಕ್ಕೆ ಉಳಿಗಾಲವಿಲ್ಲ ಎಂದು ರಾಷ್ಟ್ರ ಸೇವಿಕಾ ಸಮಿತಿ ಸುಳ್ಯ ತಾಲೂಕು ಬೌದ್ಧಿಕ್ ಪ್ರಮುಖ್ ಡಾ. ಯಶೋದಾ ರಾಮಚಂದ್ರ ಹೇಳಿದರು.
ಭಾನುವಾರ ತೆಂಕಪೇಟೆ ಲಕ್ಷಿ$್ಮ ವೆಂಕಟೇಶ ದೇವಾಲಯ ಸಮೀಪ ರಾಷ್ಟ್ರ ಸೇವಿಕಾ ಸಮಿತಿ ವತಿಯಿಂದ ಮಕರ ಸಂಕ್ರಮಣದ ಪ್ರಯುಕ್ತ ನಡೆದ ಪಥಸಂಚಲನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ವ್ಯಕ್ತಿ ನಿರ್ಮಾಣದಿಂದ ಸಮಾಜದ ನಿರ್ಮಾಣ ಸಂಟನೆ ಉದ್ದೇಶ. ಸಂಟನೆ ಕೊರತೆಯಿಂದ ಹಿಂದೂ ಸಮಾಜ ಜಾತಿ ಮತ್ತು ಮತಗಳಿಂದ ವಿಭಜನೆಗೊಂಡು ಪರಕೀಯರ ಆಳ್ವಿಕೆ ಒಳಪಡುವಂತಾಗಿತ್ತು. ನಮಗಿಂದು ಸ್ವಾತಂತ್ರ$್ಯ ಬಂದರೂ ಬ್ರೀಟಿಷ್ ಮಾನಸಿಕತೆ ಉಳಿದುಕೊಂಡಿದೆ. ಹೆಣ್ಮಕ್ಕಳು ಜಾಗೃತರಾಗುವ ಅಗತ್ಯ ಹಿಂದೆಂದಿಗಿಂತಲೂ ಇಂದು ಅತೀ ಅವಶ್ಯವಾಗಿದೆ. ಮಾತೃಶಕ್ತಿಗೆ ಅಸೀಮ ಗೌರವ ಕೊಡುವ ಪರಂಪರೆಯ ವಾರಸುದಾರರು ನಾವು ಎಂಬುದಾಗಿ ಹೆಮ್ಮೆಪಡಬೇಕು. ಮಾತೆಯರಲ್ಲಿ ರಾಷ್ಟ್ರೀಯತೆ ಜಾಗೃತಗೊಳ್ಳಬೇಕು ಎಂದರು.
ಹಿಂದುಗಳಿಗೆ ಭಾರತ ದೇಶ ಒಂದೇ ಆಶ್ರಯತಾಣ. ಇತ್ತೀಚಿನ ದಿನಗಳಲ್ಲಿ ಈ ನೆಲವನ್ನೂ ಕಸಿದುಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ. ಜಾಗದ ಪಹಣಿಯಲ್ಲಿ ವಕ್ಫ ಹೆಸರು ದಾಖಲಾಗುತ್ತಿದೆ. ಈ ಬಗ್ಗೆ ಮಾತೃಶಕ್ತಿ ಜಾಗೃತರಾಗಬೇಕು. ಸಜ್ಜನಶಕ್ತಿಯ ನಿಷ್ಕೀಯತೆ ದೇಶದ ಪತನಕ್ಕೆ ಕಾರಣವಾಗಬಹುದು ಎಂದರು.
ಮಧುಮೇಹ ತಜ್ಞೆ ಡಾ. ಶ್ರುತಿ ಬಲ್ಲಾಳ್ ಅಧ್ಯಕ್ಷತೆ ವಹಿಸಿ, ಇಂದಿನ ಯುವತಿಯರು ಮದುವೆ ಮತ್ತು ತಾಯ್ತನವನ್ನು ಮುಂದೂಡುತ್ತಿರುವುದರಿಂದ ಅನೇಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಕುಟುಂಬ ವ್ಯವಸ್ಥೆ ಬಲಗೊಳ್ಳಬೇಕಾದರೆ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದರು. ಜಿಲ್ಲಾ ಕಾರ್ಯವಾಹಿಕಾ ಶಶಿಕಲಾ ಮಣಿಯಾಣಿ ಉಪಸ್ಥಿತದ್ದರು. ಗಣವೇಷಧಾರಿ ಸೇವಿಕೆಯರಿಂದ ತೆಂಕಪೇಟೆಯಿಂದ ಕೆಎಂ ಮಾರ್ಗವಾಗಿ ತ್ರಿವೇಣಿ ಸರ್ಕಲ್, ಚಿತ್ತರಂಜನ್ ಸರ್ಕಲ್ ಮಾರ್ಗದಲ್ಲಿ ಆಕರ್ಷಕ ಪಥಸಂಚಲನ ನಡೆಯಿತು.