ಜಿಲ್ಲೆ

ಭಗವಾನ್ ಮಹಾವೀರರ ಭಾವಚಿತ್ರದ ಮೆರವಣಿಗೆ

ನರಗುಂದ: ಮಹಾವೀರ ಜಯಂತಿ ನಿಮಿತ್ತ ಪಟ್ಟಣದಲ್ಲಿ ಜೈನ್ ಸಮುದಾಯದರಿಂದ ಭಗವಾನ್ ಮಹಾವೀರರ ಭಾವಚಿತ್ರದ ಪಲ್ಲಕ್ಕಿ ಮೆರವಣಿಗೆ ಏರ್ಪಡಿಸಲಾಗಿತ್ತು.

ಇದಕ್ಕೂ ಮುನ್ನ ಮಹಾವೀರ ಭವನದಲ್ಲಿ ಜೈನ್ ಸಮುದಾಯ ಮತ್ತು ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ದಿವಾಣಿ ನ್ಯಾಯಾಧೀಶ ಜೀನಪ್ಪ ಚೌಗಲಾ ಉದ್ಘಾಟಿಸಿ ಮಾತನಾಡಿದರು.

ಶ್ರಾವಕ, ಶ್ರಾವಕಿಯರಿಂದ ಅಭಿಷೇಕ, ಪೂಜೆ ಹಾಗೂ ತೊಟ್ಟಲೋತ್ಸವ ನೆರವೇರಿಸಲಾಯಿತು.

ಜೈನ ಸಮಾಜದ ತಾಲೂಕ ಅಧ್ಯಕ್ಷ ತವನಪ್ಪ ರೋಖಡೆ, ಎಸ್.ಎಸ್. ರೋಖಡೆ, ಸಿ.ಎಸ್. ರೋಖಡೆ, ಎನ್.ವೈ. ಮುತ್ತೀನ, ಪಾಯಸ ಮುತ್ತೀನ, ವಿ.ಎಸ್. ವಜ್ರಾಂಗಿ, ನಾಗರಾಜ ವಡವಿ, ಮಹಾವೀರ ಬೋಗಾರ, ಅಂಬಣ್ಣ ರೋಖಡೆ, ಬಿ.ಎಸ್. ರೋಖಡೆ, ಅನಂತ ತುಕ್ಕೋಳ, ಜಯಪಾಲ ಮುತ್ತೀನ, ಸುವರ್ಣ ರೋಖಡೆ, ಸಾವಕ್ಕ ಮುತೀನ, ತನುಜಾ ರೋಖಡೆ, ಸ್ವಪ್ನಾ ರೋಖಡೆ, ಶಶಿಕಲಾ ವಡವಿ, ಕವಿತಾ ವಜ್ರಾಂಗಿ, ಸುಜಾತಾ ಬೋಗಾರ, ಮಂಜುಳಾ ರೋಖಡೆ, ಸುಜಾತಾ ರೋಖಡೆ, ಶ್ರುತಿ ಮುತ್ತೀನ, ಲಲಿತಾ ರೋಖಡೆ, ರಾಜೇಶ್ವರಿ ಮುತ್ತೀನ, ಪ್ರೇಮವ್ವ ತುಕ್ಕೋಳ ಇತರರಿದ್ದರು.