ಜಿಲ್ಲೆ

ಶ್ರೀ ಜಗಜ್ಯೋತಿ ಬಸವೇಶ್ವರರ ಭಾವಚಿತ್ರ ಮೆರವಣಿಗೆ

ಹುಬ್ಬಳ್ಳಿ : ಶ್ರೀ ಬಸವ ಜಯಂತಿ ಅಂಗವಾಗಿ ಮೇ 10ರ ಬೆಳಗ್ಗೆ ಸಂಜೆ 4 ಗಂಟೆಗೆ ಶ್ರೀ ಬಸವೇಶ್ವರ ಭಾವಚಿತ್ರದ ಮೆರವಣಿಗೆ ಹಾಗೂ ಜೋಡೆತ್ತಿನ ಮೆರವಣಿಗೆಯು ನಗರದ ರುದ್ರಾಕ್ಷಿಮಠದಿಂದ ಪ್ರಾರಂಭಗೊಳ್ಳಲಿದೆ.

ಇಟಗಿ ಮಾರುತಿಗಲ್ಲಿ, ಆರ್.ಕೆ. ಗಲ್ಲಿ, ಬ್ರಾಡವೇ, ಶಿವಾಜಿ ಸರ್ಕಲ್, ಮ್ಯಾದಾರ ಓಣಿ, ತುಳಜಾಭವಾನಿ ಸರ್ಕಲ್, ಎಸ್.ಟಿ. ಭಂಡಾರಿ ಕ್ರಾಸ್​ದಿಂದ ಮೂರುಸಾವಿರಮಠಕ್ಕೆ ಮೆರವಣಿಗೆ ತೆರಳಿ, ಅಲ್ಲಿಂದ ಮಹಾವೀರಗಲ್ಲಿ, ಕಾಳಮ್ಮನ ಅಗಸಿ, ಕಂಚಗಾರ ಗಲ್ಲಿ, ಹಿರೇಪೇಟ ಸರ್ಕಲ್, ಶೆಟ್ಟರ ಸರ್ಕಲ್, ಜವಳಿಸಾಲ್, ಬಾರದಾನ ಸಾಲ, ಇಟಗಿ ಮಾರುತಿಗಲ್ಲಿ ಮುಖಾಂತರ ಮಂಗಳವಾರ ಪೇಟ ಶ್ರೀ ರುದ್ರಾಕ್ಷಿಮಠಕ್ಕೆ ಬಂದು ತಲುಪಲಿದೆ. ನಂತರ ಪ್ರಸಾದ ಸೇವೆ ಜರುಗುವುದು.