ನಾಯಕನಹಟ್ಟಿ: ಪಟ್ಟಣದ ಪಾದಗಟ್ಟೆ ಆವರಣದಲ್ಲಿ ಆರ್‌ಎಸ್‌ಎಸ್ ಮತ್ತು ವಿಶ್ವಹಿಂದೂ ಪರಿಷತ್ ಪ್ರತಿಷ್ಠಾಪಿಸಿದ್ದ ಮಹಾಗಣಪತಿ ವಿಸರ್ಜನೆ ಮೆರವಣಿಗೆ ಅದ್ದೂರಿಯಾಗಿ ಬುಧವಾರ ನಡೆಯಿತು.
ಪಟ್ಟಣ ಸೇರಿ ಸುತ್ತಮುತ್ತಲ 20ಕ್ಕೂ ಹೆಚ್ಚು ಹಳ್ಳಿಗಳ ಜನರು ಶೋಭಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಪಟ್ಟಣದ ಪಾದಗಟ್ಟೆಯಿಂದ ಆರಂಭಗೊಂಡು ಮೆರವಣಿಗೆ ಬಸ್ ನಿಲ್ದಾಣ, ತೇರುಬೀದಿ, ತಿಪ್ಪೇರುದ್ರಸ್ವಾಮಿ ಒಳಮಠ, ಅಂಬೇಡ್ಕರ್, ವಾಲ್ಮೀಕಿ ವೃತ್ತ ಮೂಲಕ ಸಾಗಿ ಚಿಕ್ಕಕೆರೆ ಬಳಿ ಮುಕ್ತಾಯಗೊಂಡಿತು.
ದೊಡ್ಡಕೆರೆಯಲ್ಲಿ ಸಂಜೆ 7 ಗಂಟೆಗೆ ವಿಸರ್ಜನೆ ಮಾಡಲಾಯಿತು.