ಜಿಲ್ಲೆ

ಸುಳ್ಯದಲ್ಲಿ ಬೃಹತ್ ಪಂಜಿನ ಮೆರವಣಿಗೆ : ಅಖಂಡ ಭಾರತ ಸಂಕಲ್ಪ ಪ್ರಯುಕ್ತ ಆಯೋಜನೆ

ಸೌಮ್ಯ ಆರ್

ಸುಳ್ಯ: ಅಖಂಡ ಭಾರತ ಸಂಕಲ್ಪ ದಿನಾಚರಣೆ ಪ್ರಯುಕ್ತ ವಿಶ್ವ ಹಿಂದು ಪರಿಷತ್, ಬಜರಂಗದಳ, ಮಾತೃಶಕ್ತಿ, ದುರ್ಗಾವಾಹಿನಿ ಸುಳ್ಯ ನಗರ ಹಾಗೂ ಸುಳ್ಯ ಪ್ರಖಂಡದ ನೇತೃತ್ವದಲ್ಲಿ ಗುರುವಾರ ಬೃಹತ್ ಪಂಜಿನ ಮೆರವಣಿಗೆ ಆಯೋಜಿಸಲಾಯಿತು.

ಸುಳ್ಯದ ಶಾಸಿ ವೃತ್ತದಿಂದ ಮುಖ್ಯ ರಸ್ತೆಯಾಗಿ ಗಾಂಧಿನಗರ ಮೂಲಕ ತೆರಳಿ ಚೆನ್ನಕೇಶವ ದೇವಸ್ಥಾನದ ಬಳಿ ಮೆರವಣಿಗೆ ಸಮಾಪ್ತಿಗೊಂಡಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ವಿಶ್ವಹಿಂದು ಪರಿಷತ್- ಬಜರಂಗ ದಳ ಮಂಗಳೂರು ವಿಭಾಗ ಸಹ ಸಂಯೋಜಕ ಪುನೀತ್ ಅತ್ತಾವರ ಮುಖ್ಯಭಾಷಣ ಮಾಡಿದರು.

ಸುಳ್ಯ ಪ್ರಖಂಡ ಅಧ್ಯಕ್ಷ ಶ್ರೀಕಾಂತ್ ಗೋಳ್ವಾಲ್ಕರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಿವತ್ತ ಯೋಧರಾದ ಹೇಮನಾಥ ಬಿ.ಕೊಡಿಯಾಲಬೈಲು, ಉಪೇಂದ್ರ ನಾಯಕ್ ಸುಳ್ಯ, ರೂಪೇಶ್ ಪೂಜಾರಿಮನೆ, ಪ್ರಮುಖರಾದ ಪ್ರದ್ಯುಮ್ನ ಉಬರಡ್ಕ, ಹರೀಶ್ ಕಂಜಿಪಿಲಿ, ಎ.ಟಿ.ಕುಸುಮಾಧರ, ಜಿ.ಜಿ ನಾಯಕ್, ವರ್ಷಿತ್ ಚೊಕ್ಕಾಡಿ, ಗಿರೀಶ್ ಕಲ್ಲುಗದ್ದೆ, ಪ್ರಬೋಧ್ ಶೆಟ್ಟಿ ಮೇನಾಲ, ಸುಧಾಕರ ಕೇರ್ಪಳ, ಶಿನಪ್ಪ ಬಯಂಬು ಮತ್ತಿತರರು ಉಪಸ್ಥಿತರಿದ್ದರು.

ಬಜರಂಗದಳ ಸಂಯೋಜಕ ಹರಿಪ್ರಸಾದ್ ಎಲಿಮಲೆ ಸ್ವಾಗತಿಸಿದರು. ರಾಜೇಶ್ ಕಲ್ಲುಮುಟ್ಲು ವಂದಿಸಿದರು. ಗಿರೀಶ್ ಕುಂಟಿನಿ ಕಾರ್ಯಕ್ರಮ ನಿರೂಪಿಸಿದರು. ಅಭಿಜ್ಞಾ ಭಟ್ ವಂದೇ ಮಾತರಂ ಗೀತೆ ಹಾಡಿದರು.