ಹುಬ್ಬಳ್ಳಿ: ಜೀವನಾನುಭವ ಪಡೆದಿರುವ ಹಿರಿಯ ನಾಗರಿಕರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಪ್ರಯೋಜನಗಳನ್ನು ಪಡೆದುಕೊಂಡು, ತಮ್ಮ ಜೀವನದ ಸಂಧ್ಯಾ ಕಾಲದ ಸಂತೋಷವನ್ನು ಹೆಚ್ಚಿಸಿಕೊಳ್ಳಬೇಕೆಂದು ಹುಬ್ಬಳ್ಳಿ ಕಾನೂನು ಪ್ರಾಧಿಕಾರದ ಡಿಫೆನ್ಸ್ ಕೌನ್ಸಿಲರ್ ಎಸ್.ಎಸ್. ಪಾಟೀಲ ಹೇಳಿದರು.
ಇಲ್ಲಿಯ ಲಿಂಗರಾಜನಗರ ಸಮುದಾಯ ಭವನದಲ್ಲಿ ಪ್ರೋಬಸ್ ಕ್ಲಬ್ ಮತ್ತು ಕೆಎಲ್ಇ ಧ್ವನಿ ಸಮುದಾಯ ಬಾನುಲಿ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ನಮ್ಮ ಹಿರಿಯರು, ನಮ್ಮ ಗೌರವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರವು ಹಿರಿಯ ನಾಗರಿಕರಿಗೆ ಮನೆಯಲ್ಲಿಯೇ ಇದ್ದುಕೊಂಡು ನ್ಯಾಯ ನಿರ್ಣಯಗಳನ್ನು ಪಡೆದುಕೊಳ್ಳುವ ಮಾಹಿತಿ ನೀಡಿದರು. ಹಿರಿಯ ನಾಗರಿಕರಿಗೆ ಸರ್ಕಾರದ ವತಿಯಿಂದ ವಕೀಲರನ್ನು ಉಚಿತವಾಗಿ ತಾಲೂಕು, ಜಿಲ್ಲೆ ಮತ್ತು ರಾಜ್ಯದಲ್ಲಿ ನೇಮಿಸಿದ್ದು, ಅಗತ್ಯ ಇದ್ದಾಗ ಅವರ ಸಹಾಯ ಪಡೆಯಬೇಕೆಂದು ಸಲಹೆ ನೀಡಿದರು.
ಬಾಗಲಕೋಟೆ ಬಿ.ಇ.ಸಿ. ಧ್ವನಿ, ಸಮುದಾಯ ಕೇಂದ್ರದ ವ್ಯವಸ್ಥಾಪಕ ಭರತ ಬಡಿಗೇರ ಮಾತನಾಡಿ, ಹಿರಿಯ ನಾಗರಿಕರು ಸರ್ಕಾರದ ಸಾಮಾಜಿಕ ಮತ್ತು ಆರ್ಥಿಕ ನೀತಿಗಳ ಪ್ರಯೋಜನಗಳ ಬಗ್ಗೆ ವಿವರಿಸಿದರು.
ಕೆ.ಎಲ್.ಇ. ಧ್ವನಿ ಸಮುದಾಯ ಬಾನುಲಿ ಕೇಂದ್ರದ ಸಂಯೋಜಕ ರವೀಂದ್ರ ಕವಟೇಕರ ಮಾತನಾಡಿ, ಯುವ ಜನಾಂಗದವರು ಗುರು-ಹಿರಿಯರಿಗೆ ಮತ್ತು ತಂದೆ- ತಾಯಿಗಳಿಗೆ ವಿಧೇಯರಾಗಿ ನಡೆದುಕೊಳ್ಳಬೇಕು ಎಂದರು.
ಕೇಂದ್ರ ಸರ್ಕಾರದ ಸಾಮಾಜಿಕ ಸಚಿವಾಲಯದ ಸಹಭಾಗಿತ್ವದಲ್ಲಿ ಅಟಲ್ ವಯೋ ಅಭ್ಯುದಯ ಯೋಜನೆಯ ಅಡಿಯಲ್ಲಿ ದೇಶಾದ್ಯಂತ 200ಕ್ಕೂ ಹೆಚ್ಚಿನ ಸಮುದಾಯ ರೇಡಿಯೋ ಬಾನುಲಿಗಳು ವಿವಿಧ ಭಾಷೆಗಳಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡುತ್ತಿವೆ ಎಂದರು.
ಪ್ರೋಬಸ್ ಕ್ಲಬ್ ಅಧ್ಯ ಡಾ. ಬಸವರಾಜ ಕೋಟಿ ಅಧ್ಯತೆ ವಹಿಸಿದ್ದರು. ಉಪಾಧ್ಯ ಡಾ. ಎಂ.ಜಿ. ಸಜ್ಜನರ ಸ್ವಾಗತಿಸಿದರು. ಎಸ್.ಎಸ್. ಕರಡಿ ಪ್ರಾಥಿರ್ಸಿದರು. ಪ್ರೊ. ಕೆ.ಎಸ್. ಕೌಜಲಗಿ ಮತ್ತು ಎಂ.ಕೆ. ನಾಯ್ಕರ ಅನಿಸಿಕೆ ವ್ಯಕ್ತಪಡಿಸಿದರು. ನಿರ್ದೇಶಕ ಡಾ. ಬಿ.ಎಸ್. ಮಾಳವಾಡ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಉಮೇಶ ಪಾಟೀಲ ವಂದಿಸಿದರು.