ಜಿಲ್ಲೆ

ಪಿಂಚಣಿ ಅದಾಲತ್​ನಿಂದ ಸಮಸ್ಯೆ ಪರಿಹಾರ

ದತ್ತಾತ್ರೇಯ ಪಿ ಕುಲಕರ್ಣಿ

ಲೋಕಾಪುರ: ಪಟ್ಟಣದಲ್ಲಿ ಲೋಕಾಪುರ ಹೋಬಳಿ ಮಟ್ಟದ ಪಿಂಚಣಿ ಅದಾಲತ್​ ಕಾರ್ಯಕ್ರಮ ಉಪತಹಸೀಲ್ದಾರ್​ ಬಿ.ಎಸ್​. ರಂಗಣ್ಣವರ ನೇತೃತ್ವದಲ್ಲಿ ನಡೆಯಿತು.ಉಪತಹಸೀಲ್ದಾರ್​ ಬಿ.ಎಸ್​. ರಂಗಣ್ಣವರ ಮಾತನಾಡಿ, ಸಾರ್ವಜನಿಕರ ಅನುಕೂಲಕ್ಕಾಗಿ ಸರ್ಕಾರ ಹೋಬಳಿ ಮಟ್ಟದಲ್ಲಿ ಪಿಂಚಣಿ ಅದಾಲತ್​ಗಳನ್ನು ನಡೆಸುತ್ತಿದೆ. ಹಣ ಪಾವತಿಯಾಗದಿರುವ ಹಾಗೂ ಪಿಂಚಣಿಗೆ ಸಂಬಂಧಿಸಿದ ಇತರ ದೂರುಗಳಿದ್ದಲ್ಲಿ ಸದರಿ ಅದಾಲತ್​ ಹಾಜರಾಗಿ ಪರಿಹಾರ ಪಡೆದುಕೊಳ್ಳಬಹುದಾಗಿದೆ.

ಸಾಮಾಜಿಕ ಭದ್ರತಾ ಯೋಜನೆಗಳಾದ ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ, ಸಂಧ್ಯಾ ಸುರಾ ಯೋಜನೆ, ಅಂಗವಿಕಲ ವೇತನ, ನಿರ್ಗತಿಕ ವಿಧವಾ ವೇತನ, ಮೈತ್ರಿ ಯೋಜನೆ ಹಾಗೂ ಮನಸ್ವಿನಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಪಿಂಚಣಿ ಅದಾಲತ್​ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಕಂದಾಯ ನಿರೀಕ ಸತೀಶ ಬೇವೂರ, ಗ್ರಾಮ ಆಡಳಿತ ಅಧಿಕಾರಿಗಳಾದ ಪ್ರಕಾಶ ಶೇರಖಾನೆ, ಗಿರೀಶ ಹಡಪದ, ಸಂತೋಷ ಚಾಂದಗಾರ, ಬಸವರಾಜ ಮಠಪತಿ, ರಾಜು ಪೂಜಾರಿ, ಕಂದಾಯ ಇಲಾಖೆ ಸಿಬ್ಬಂದಿ ರೇಷ್ಮಾ ಜಮಾದಾರ ಇದ್ದರು.

ಲೋಕಾಪುರ ಉಪತಹಸೀಲ್ದಾರ್​ ಬಿ.ಎಸ್​. ರಂಗಣ್ಣವರ ನೇತೃತ್ವದಲ್ಲಿ ಹೋಬಳಿ ಮಟ್ಟದ ಪಿಂಚಣಿ ಅದಾಲತ್​ ಕಾರ್ಯಕ್ರಮ ಜರುಗಿತು.