ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಅಂಗ ಸಂಸ್ಥೆ ಯಕ್ಷ ಶಾಲ್ಮಲಾ ಹಮ್ಮಿಕೊಂಡ ಎರಡು ದಿನಗಳ ಯಕ್ಷೋತ್ಸವದಲ್ಲಿ ಆಯೋಜನೆಗೊಂಡಿದ್ದ ಮಕ್ಕಳ ತಾಳಮದ್ದಳೆ ಸ್ಪರ್ಧೆಯಲ್ಲಿ ವಿಜೇತ ತಂಡಗಳಿಗೆ ಸ್ವರ್ಣವಲ್ಲೀ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿ ಪ್ರಶಂಸಾ ಪತ್ರ ನೀಡಿದರು.
ಹಿರಿಯರ ವಿಭಾಗದಲ್ಲಿ ಭೈರುಂಬೆ ತಂಡ ಪ್ರಥಮ, ಹೆಗಡೆಕಟ್ಟ ತಂಡ ದ್ವಿತೀಯ, ನಂದೊಳ್ಳಿ ತಂಡ ತೃತೀಯ ಬಹುಮಾನ ಪಡೆಯಿತು.
ಕಿರಿಯರ ವಿಭಾಗದಲ್ಲಿ ಕೊಡಸೆ ತಂಡ ಪ್ರಥಮ, ಲಯನ್ಸ್ ತಂಡ ದ್ವಿತೀಯ, ಯಲ್ಲಾಪುರ ತಂಡ ತೃತೀಯ ಬಹುಮಾನ ಪಡೆಯಿತು. ಸಾಂಸ್ಥಿಕ ವಿಭಾಗದಲ್ಲಿ ಯಕ್ಷ ಸಂಸ್ಕೃತಿ ಹಸರಪಾಲು, ಯಕ್ಷಗೆಜ್ಜೆ ಶಿರಸಿ, ಸಪ್ತಸ್ವರ ಜೊಯಿಡಾ ಸಂಸ್ಥೆಗಳು ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಪಡೆದರು.
ಈ ವೇಳೆ ಧಾರವಾಡ ಹಾಲು ಒಕ್ಕೂಟ ಉಪಾಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೇಶಿನ್ಮನೆ, ಹೋರಾಟಗಾರ ಅನಂತಮೂರ್ತಿ ಹೆಗಡೆ, ಕಾರ್ಯಾಧ್ಯಕ್ಷ ಆರ್.ಎಸ್.ಹೆಗಡೆ, ಕಾರ್ಯದರ್ಶಿ ನಾಗರಾಜ ಜೋಶಿ ಇದ್ದರು. ಪ್ರವೀಣ ಮಣ್ಮನೆ ಬಹುಮಾನ ಪ್ರಕಟಿಸಿದರು.