ಜಿಲ್ಲೆ

ವಚನಸಾಹಿತ್ಯ ರಸಪ್ರಶ್ನೆ ಬೀರೂರು ಶೋಭ ಉಮೇಶ್‌ಗೆ ಬಹುಮಾನ

ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ವಚನ ಸಾಹಿತ್ಯಕ್ಕೆ ಸಂಬಂಧಿಸಿದಂತೆ ಅಂತರ್ಜಾಲದ ಮೂಲಕ ನಡೆದ ಥಟ್ ಅಂತ ಉತ್ತರಿಸಿ 65ನೇ ವಚನ ಸಾಹಿತ್ಯ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಜಿಲ್ಲೆ ಬಿರೂರು ಶೋಭ ಉಮೇಶ್ ಪಡೆದಿದ್ದಾರೆ.

ಅವರು ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುವುದರ ಮೂಲಕ ಬಹುಮಾನಕ್ಕೆ ಭಾಜನರಾಗಿದ್ದಾರೆ ಎಂದು ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕಿ ರೂಪ ಕುಮಾರಸ್ವಾಮಿ ತಿಳಿಸಿದ್ದಾರೆ.