Prize for Karpanahalli school students 
ಜಿಲ್ಲೆ

ಕರಪನಹಳ್ಳಿ ಶಾಲೆ ವಿದ್ಯಾರ್ಥಿಗಳಿಗೆ ಬಹುಮಾನ

ಶಿವರಾಜ.ಎಂ

ನಂದಗುಡಿ: ಹೋಬಳಿಯ ಕರಪನಹಳ್ಳಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳು ಶಿವನಾಪುರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕ್ಲಸ್ಟರ್‌ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಗಳಿಸಿ, ತಾಲೂಕುಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಮುಖ್ಯಶಿಕ್ಷಕಿ ಜಿ.ಶಕುಂತಲಾ ತಿಳಿಸಿದ್ದಾರೆ. ಕ್ಲೇ ಮಾಡಲಿಂಗ್‌ನಲ್ಲಿ ಹರಿಕೃಷ್ಣ ಪ್ರಥಮ, ಛದ್ಮವೇಷದಲ್ಲಿ ಕಾರುಣ್ಯಾ ಪ್ರಥಮ, ಭಕ್ತಿಗೀತೆ ಗಾಯನದಲ್ಲಿ ತೃಪ್ತಿ ಪ್ರಥಮ ಸ್ಥಾನ ಗಳಿಸಿ ತಾಲೂಕು ಮಟ್ಟಕ್ಕೆ ಅಯ್ಕೆಯಾಗಿದ್ದು, ಅಭಿನಯಗೀತೆಯಲ್ಲಿ ದ್ವಿತೀಯ, ಆಶುಭಾಷಣದಲ್ಲಿ ಅಕ್ಷತಾ ದ್ವಿತೀಯ ಹಾಗೂ ಕಥೆ ಹೇಳುವ ಸ್ಪರ್ಧೆಯಲ್ಲಿ ದೀಕ್ಷಾ ತೃತೀಯ ಸ್ಥಾನ ಗಳಿಸಿದ್ದಾರೆ.