ಜಿಲ್ಲೆ

ಜೆಎಸ್‌ಎಸ್ ಕಾಲೇಜು ವಿದ್ಯಾರ್ಥಿಗಳಿಗೆ ಬಹುಮಾನ

ಮೈಸೂರು: ಕೇಂದ್ರ ಸರ್ಕಾರದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯ ಸಹಯೋಗದಲ್ಲಿ ತಮಿಳುನಾಡು ಪುದುಚೇರಿಯ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಆಯೋಜಿಸಿದ್ದ ಗ್ರಾಹಕರ ಕಾನೂನು ಕುರಿತು 47ನೇ ಅಖಿಲ ಭಾರತ ಕಲ್ಪಿತ ನ್ಯಾಯಾಲಯ ಸ್ಪರ್ಧೆಯಲ್ಲಿ ಮೈಸೂರಿನ ಜೆಎಸ್‌ಎಸ್ ಕಾಲೇಜು ವಿದ್ಯಾರ್ಥಿಗಳು ಪ್ರಥಮ ಬಹುಮಾನ ಪಡೆದಿದ್ದಾರೆ.
ಮಾ.8 ರಿಂದ 10ರವರೆಗೆ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಜೆಎಸ್‌ಎಸ್ ಕಾನೂನು ಕಾಲೇಜಿನ ವಿದ್ಯಾರ್ಥಿಗಳಾದ ರೋಹನ್ ವಿ.ಗಂಗಾಡ್ಕರ್, ಅಮೂಲ್ಯ ಎನ್. ಪ್ರಸಾದ್, ನಿಕಿತಾ ಸುಸಾನ್ ಈಪೆನ್ ಅವರು ವಿಜೇತರಾಗಿ 50 ಸಾವಿರ ರೂ. ನಗದು ಬಹುಮಾನ ಪಡೆದಿದ್ದಾರೆ.
ರೋಹನ್ ವಿ.ಗಂಗಡ್ಕರ್ ಅವರು ‘ಅತ್ಯುತ್ತಮ ಕಾನೂನು ಸಂಶೋಧಕ’ ಪ್ರಶಸ್ತಿ ತಮ್ಮದಾಗಿಸಿಕೊಂಡು 5 ಸಾವಿರ ರೂ. ನಗದು ಪಡೆದುಕೊಂಡರು. ಇವರು ನಗರದ ಹಿರಿಯ ವಕೀಲ ಲಾಗೈಡ್ ಎಚ್.ಎನ್.ವೆಂಕಟೇಶ್ ಅವರ ಪುತ್ರ.
ಈ ಸ್ಪರ್ಧೆಯಲ್ಲಿ ದೇಶಾದ್ಯಂತ 55 ತಂಡಗಳು ಭಾಗವಹಿಸಿದ್ದವು. ವಿಜೇತರಿಗೆ ಪುದುಚೇರಿ ಹೈಕೋರ್ಟ್ ನ್ಯಾಯಮೂರ್ತಿಗಳಾದ ಜಿ.ಆರ್.ಸ್ವಾಮಿನಾಥನ್, ಸುಂದರ್ ಮೋಹನ್, ಹೈದರಾಬಾದ್ ವಿವಿ ಉಪ ಕುಲಪತಿ ಪ್ರೊ.ಶ್ರೀಕೃಷ್ಣ ದೇವರಾವ್ ಅವರು ಬಹುಮಾನ ವಿತರಿಸಿದರು.