ಮೈಸೂರು: ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾಲಯದಲ್ಲಿ (ಸಿಎಫ್‌ಟಿಆರ್‌ಐ)ಸಂಶೋಧನೆ ನಡೆಸುತ್ತಿರುವ ಎಂ.ಎಲ್.ಭವ್ಯಾ ಅವರಿಗೆ ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಾಲಯ ನಡೆಸುವ ರಾಷ್ಟ್ರಮಟ್ಟದ ವಿಜ್ಞಾನ ಬರವಣಿಗೆ ಸ್ಪರ್ಧೆಯಲ್ಲಿ ಮೂರನೇ ಬಹುಮಾನ ದೊರೆತಿದೆ.
ಭವ್ಯಾ ಅವರು ಬರೆದ ಲೈಟ್, ಸೌಂಡ್ಸ್, ಆ್ಯಕ್ಷನ್ ಎನ್ನುವ ಪ್ರಬಂಧಕ್ಕೆ ಮೂರನೇ ಸ್ಥಾನ ಲಭಿಸಿದ್ದು, 25 ಸಾವಿರ ರೂ. ಬಹುಮಾನ ಹಾಗೂ ಪ್ರಶಸ್ತಿ ದೊರಕಿದೆ.
‘ಆವಸರ್’ ಎನ್ನುವ ಹೆಸರಿನಲ್ಲಿ ಪ್ರತಿ ವರ್ಷವೂ ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಾಲಯವು ಈ ಸ್ಪರ್ಧೆಯನ್ನು ನಡೆಸುತ್ತದೆ. ತಮ್ಮ ಸಂಶೋಧನೆಯ ವಿಷಯಗಳನ್ನು ಸರಳ ಭಾಷೆಯಲ್ಲಿ ಪ್ರಸ್ತುತ ಪಡಿಸುವ ಪ್ರಬಂಧಗಳ ಈ ಸ್ಪರ್ಧೆಯಲ್ಲಿ ಪಿಎಚ್.ಡಿ ಮಾಡುತ್ತಿರುವವರ ಲೇಖನಗಳು, ಅತ್ಯುತ್ತಮ ಮೂರು ಪ್ರಬಂಧಗಳಿಗೆ ಪ್ರಶಸ್ತಿ ನೀಡಲಾಗುವುದು.
ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಿಜ್ಞಾನ ದಿನಾಚರಣೆಯ ಸಮಾರಂಭದಲ್ಲಿ ಕೇಂದ್ರ ಸಚಿವ ಡಾ. ಹರ್ಷವರ್ಧನ್ ಅವರು ಭವ್ಯಾ ಅವರಿಗೆ ಪ್ರಶಸ್ತಿ ವಿತರಿಸಿದರು.