ಅರಕಲಗೂಡಿನಲ್ಲಿ ನಡೆದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಗೆಲುವು ಸಾಧಿಸಿದ ಹಾಸನ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳನ್ನು ಕಾಲೇಜಿನ ಕಾರ್ಯದರ್ಶಿ ಬಿ.ಕೆ. ಗಂಗಾಧರ್, ಪ್ರಾಂಶುಪಾಲ ನವೀನ್ ಪಿ.ಉಲಿವಾಲ ಅಭಿನಂದಿಸಿದರು.  
ಜಿಲ್ಲೆ

ದಸರಾ ಕ್ರೀಡಾಕೂಟದಲ್ಲಿ ಹಾಸನ ಪಿಯು ಕಾಲೇಜಿಗೆ ಬಹುಮಾನ

ಅರಕಲಗೂಡು: ಪಟ್ಟಣದ ಬಾಲಕರ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಇತ್ತೀಚೆಗೆ ನಡೆದ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಹಾಸನ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ.


ಮಹಿಳಾ ವಾಲಿಬಾಲ್ ವಿಭಾಗದಲ್ಲಿ ಪ್ರಥಮ, ಕಬಡ್ಡಿ ಮತ್ತು ಖೋಖೋ ವಿಭಾಗದಲ್ಲಿ ದ್ವಿತೀಯ, 4*100 ರಿಲೇಯಲ್ಲಿ ಪ್ರಥಮ, ಟ್ರಿಪಲ್ ಜಂಪ್ ಪ್ರಥಮ ಹಾಗೂ ವೈಯಕ್ತಿಕ ವಿಭಾಗದಲ್ಲಿ ಎತ್ತರ ಜಿಗಿತದಲ್ಲಿ ಖುಷಿ ಎಸ್.ಅಭಿಗೇಲ್ ಪ್ರಥಮ ಹಾಗೂ ಹೇಮಲತಾ ದ್ವಿತೀಯ ಸ್ಥಾನ ಪಡೆದಿದ್ದಾರೆ. ವಿವಿಧ ಕ್ರೀಡೆಗಳಲ್ಲಿ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಕಾಲೇಜಿನ ಕಾರ್ಯದರ್ಶಿ ಬಿ.ಕೆ.ಗಂಗಾಧರ್, ಪ್ರಾಂಶುಪಾಲ ನವೀನ್ ಪಿ.ಉಲಿವಾಲ ಮತ್ತು ಉಪನ್ಯಾಸಕರು ಅಭಿನಂದಿಸಿದ್ದಾರೆ.