ಕುಶಾಲನಗರ: ಕುಶಾಲನಗರದ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ವತಿಯಿಂದ ಫಾತಿಮಾ ಪ್ರೌಢಶಾಲೆಯಲ್ಲಿ ಏರ್ಪಡಿಸಲಾಗಿದ್ದ ಚಿತ್ರಕಲೆ ಹಾಗೂ ಕೈಬರಹ ಸ್ಪರ್ಧೆಯ ವಿಜೇತರಿಗೆ ಮಂಗಳವಾರ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯ ಕೆ.ಬಿ.ಶಂಶುದ್ಧೀನ್ ಬಹುಮಾನ ಹಾಗೂ ಪ್ರಮಾಣ ಪತ್ರ ವಿತರಿಸಿದರು.
ಚಿತ್ರಕಲೆಯಲ್ಲಿ ಸಬ್ ಜೂನಿಯರ್ ವಿಭಾಗದ ಕೆ.ಎಂ.ಯುಕ್ತಿ ಪ್ರಥಮ, ಬಾನುತೇಜ್ ದ್ವಿತೀಯ, ಕರುಣ್ ತೃತೀಯ, ಜೂನಿಯರ್ ವಿಭಾಗದಲ್ಲಿ ಎಚ್.ಎ. ಸೋನು ಪ್ರಥಮ, ಸೃಜನ್ ದ್ವಿತೀಯ, ಟೆರೆನ್ಸ್ ಡಿಸೋಜಾ ತೃತೀಯ, ಸೀನಿಯರ್ ವಿಭಾಗದಲ್ಲಿ ಎ.ಸಿ.ಕನಿಷ್ಕಾ ಪ್ರಥಮ, ಕೆ.ಎಸ್.ಸುಹಾಸ್ ದ್ವಿತೀಯ, ಅಕ್ಷತಾ ಹಾಗೂ ಪಿ.ವಿ.ಪ್ರಿಯಾ ತೃತೀಯ ಸ್ಥಾನವನ್ನು ಪಡೆದುಕೊಂಡರು.
ಕೈ ಬರಹ ಸ್ಪರ್ಧೆಯಲ್ಲಿ ಕೆ.ಎನ್.ಶ್ವೇತಾ ಪ್ರಥಮ, ಎಸ್.ಹಾರುನ್ ದ್ವಿತೀಯ, ಡಿ.ಸಿ.ಲಾವಣ್ಯ ತೃತೀಯ, ಜೂನಿಯರ್ ವಿಭಾಗದಲ್ಲಿ ವಿ.ಉಜ್ವಲಾ ಪ್ರಥಮ, ಸಿಯೋನಾ ಏಂಜಲ್ ದ್ವಿತೀಯ, ಕೆ.ಎಲ್.ಜೀವನ್ ತೃತೀಯ, ಸೀನಿಯರ್ ವಿಭಾಗದಲ್ಲಿ ಎಂ.ಆರ್.ರಂಜಿನಿ ಪ್ರಥಮ, ಎ.ಸಿ.ಕನಿಷ್ಕಾ ದ್ವಿತೀಯ, ವೈ.ಪಿ.ಪ್ರಿಯಾ ಹಾಗೂ ಸುಮತಿ ತೃತೀಯ ಸ್ಥಾನ ಪಡೆದುಕೊಂಡರು. ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿಯ ನೃತ್ಯ ಸಂಯೋಜಕ ಅಕ್ತರ್ ಹಾಗೂ ಪಾಲಕರು ಇದ್ದರು.