ಬದಿಯಡ್ಕ: ಕಿಳಿಂಗಾರಿನ ಯುವಕೇಸರಿ ಆರ್ಟ್ಸ್ ಆ್ಯಂಡ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ನವರಾತ್ರಿ ಪ್ರಯುಕ್ತ ನಡೆಸಲ್ಪಟ್ಟ ಧಾರ್ಮಿಕ ಆನ್‌ಲೈನ್ ರಸಪ್ರಶ್ನೆ ಸ್ಫರ್ಧಾ ವಿಜೇತರಿಗೆ ಬಹುಮಾನ ವಿತರಣೆ ಇತ್ತೀಚೆಗೆ ಜರುಗಿತು.
ಕ್ಲಬ್ ಅಧ್ಯಕ್ಷ ಪ್ರವೀಣ್ ಕಕ್ಕಳ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಾರಾಯಣ ಪಿ.ಪೆರಡಾಲ ಕ್ಲಬ್‌ನ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸಿದರು. ಬಳಿಕ ರಸಪ್ರಶ್ನೆ ವಿಜೇತರಿಗೆ ಬಹುಮಾನ ನೀಡಲಾಯಿತು. ಪ್ರಥಮ ಬಹುಮಾನಿತ ಸುಜಾತ ಶೆಟ್ಟಿ ದರ್ಬೆತ್ತಡ್ಕ, ದ್ವಿತೀಯ ಬಹುಮಾನಿತ ಜಗದೀಶ್ ಕಿಳಿಂಗಾರ್, ತೃತೀಯ ಬಹುಮಾನಿತ ಶ್ಯಾಮ ಆಳ್ವ ವಿದ್ಯಾಗಿರಿ ಅವರಿಗೆ ಕ್ಲಬ್‌ನ ಸದಸ್ಯರಾದ ವಸಂತ ಅನ್ನೆಪಳ್ಳಡ್ಕ, ರಾಮ ಬೇರಿಕೆ ಹಾಗೂ ನಾರಾಯಣ ಪಿ. ಬಹುಮಾನ ವಿತರಿಸಿದರು.
ಸದಸ್ಯರಾದ ರಾಕೇಶ್ ಕಿಳಿಂಗಾರ್, ರಾಜೇಶ್ ಬೇರಿಕೆ, ಅನಿಲ್ ಕನ್ಯಪ್ಪಾಡಿ, ಪ್ರಶಾಂತ್ ಸಿ.ಎಚ್, ಮನೋಜ್ ಕಿಳಿಂಗಾರ್, ಅನೀಶ್, ರಕ್ಷಿತ್ ಕಕ್ಕಳ ಉಪಸ್ಥಿತರಿದ್ದರು. ಕಾರ್ಯದರ್ಶಿ ಪ್ರಕಾಶ್ ಸಿ.ಎಚ್. ಸ್ವಾಗತಿಸಿದರು. ಸಿ.ರಂಜಿತ್ ಕಕ್ಕಳ ವಂದಿಸಿದರು.