ಜಿಲ್ಲೆ

ಗಾಂಧಿ ಜಯಂತಿ ಪ್ರಯುಕ್ತ ಪ್ರಬಂಧ ಸ್ಪರ್ಧೆ: ವಿಜೇತರಿಗೆ ಬಹುಮಾನ ವಿತರಣೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಗಾಂಧಿ ಜಯಂತಿ ಅಂಗವಾಗಿ ಆಯೋಜಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಶಸ್ತಿ ಪತ್ರ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಯಿತು.

ಕಾವೇರಿ ಉದ್ಯಾನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ ಬಹುಮಾನ ವಿತರಿಸಿದರು. ಪ್ರೌಢಶಾಲಾ ವಿಭಾಗ: ಪಾಂಡವಪುರ ತಾಲೂಕು ಟಿ.ಎಸ್.ಛತ್ರ ಸರ್ಕಾರಿ ಪ್ರೌಢಶಾಲೆಯ ಮಹಾಲಕ್ಷ್ಮೀ(ಪ್ರ), ಮಂಡ್ಯ ಗ್ಲೋಬಲ್ ಪಬ್ಲಿಕ್ ಶಾಲೆಯ ಕೆ.ಎಸ್.ದೀಪ್ತಿಶ್ರೀ(ದ್ವಿ), ಮದ್ದೂರು ತಾಲೂಕು ಪೂರ್ಣಪ್ರಜ್ಞಾ ಶಾಲೆಯ ಎಸ್.ಪಿ.ಚಂದನಾ(ತೃ), ಪದವಿ ಪೂರ್ವ ಶಿಕ್ಷಣ ವಿಭಾಗ: ಮಂಡ್ಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ (ಮಾಜಿ ಪುರಸಭೆ) ಲಕ್ಷ್ಮೀ(ಪ್ರ), ಮಂಡ್ಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ(ಕಲ್ಲುಕಟ್ಟಡ) ನಿಸರ್ಗ(ದ್ವಿ), ಕೆ.ಆರ್.ಪೇಟೆ ತಾಲೂಕು ಹರಿಹರಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಛಾಯಾವತಿ(ತೃ), ಪದವಿ-ಸ್ನಾತಕೋತ್ತರ ಪದವಿ ವಿಭಾಗ: ನಾಗಮಂಗಲ ತಾಲೂಕು ಆದಿಚುಂಚನಗಿರಿ ಕಲಾ ವಾಣಿಜ್ಯ ಕಾಲೇಜಿನ ಬಿ.ಎಸ್.ನೇತ್ರಾಪ್ರ), ಮಂಡ್ಯ ಸರ್ಕಾರಿ ಮಹಿಳಾ ಕಾಲೇಜಿನ (ಸ್ವಾಯತ್ತ) ಎಸ್.ಯುಕ್ತಿ(ದ್ವಿ), ಮದ್ದೂರು ತಾಲೂಕು ಕೊಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎ.ಎಸ್.ಭವಾನಿ(ತೃ) ಸ್ಥಾನ ಪಡೆದಿದ್ದಾರೆ.