ವಿಜಯಪುರ:ಸನ್ಮಾನಗಳು ವಿದ್ಯಾರ್ಥಿಗಳಿಗೆ ಪ್ರೇರಣೆ ಮತ್ತು ಕಲಿಕೆಗೆ ಮತ್ತಷ್ಟು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಹಕಾರಿಯಾಗಿವೆ ಎಂದು ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು.
ಸತಾಲೂಕಿನ ಜಂಬಗಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಬಿಡದಿ ಮೈಕೊ ಕನ್ನಡ ಬಳಗ ಹಾಗೂ ಕಸಾಪ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕನ್ನಡ ಮಾಧ್ಯಮದ ಎಸ್ಎಸ್ಎಲ್ಸಿ ಪರೀೆಯಲ್ಲಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಿಡದಿ ಕನ್ನಡ ಬಳಗದವರು 600 ಕಿಲೋ ಮೀಟರ್ ದೂರದಿಂದ ವಿಜಯಪುರ ಜಿಲ್ಲೆಗೆ ಆಗಮಿಸಿ ಇಲ್ಲಿನ ಕನ್ನಡ ಮಾಧ್ಯಮದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುತ್ತಿರುವ ಕಾರ್ಯ ಶ್ಲಾನೀಯ ಎಂದರು.
ಶಾಲೆಯ ಮುಖ್ಯ ಗುರುಮಾತೆ ರೇಣುಕಾ ಕೊಣ್ಣೂರ ಮಾತನಾಡಿ, ಜಿಲ್ಲೆಯ ಸರ್ಕಾರಿ ಪ್ರೌಢ ಶಾಲೆಗಳು ಹಾಗೂ ವಿವಿಧ ವಸತಿ ಶಾಲೆಗಳಲ್ಲಿರುವ ವಿದ್ಯಾರ್ಥಿಗಳು ಪ್ರತಿ ವರ್ಷವೂ ಕೂಡ ಉತ್ತಮ ಫಲಿತಾಂಶ ಪಡೆದು ಜಿಲ್ಲೆಯ ಗೌರವ ತರುತ್ತಿದ್ದಾರೆ ಎಂದರು.
ಬಿಡದಿ ಕನ್ನಡ ಬಳಗದ ಸದಸ್ಯ ಮಂಜುನಾಥ ಅಧಿಕ ಅಂಕ ಪಡೆದ ವಿದ್ಯಾರ್ಥಿನಿಯರಾದ ಅನ್ನಪೂರ್ಣ ದೇಶಮುಖ, ಗಂಗವ್ವಾ ಪೂಜಾರಿ ಮತ್ತು ವೈಶಾಲಿ ಹಿರೇಮಠ ಅವರಿಗೆ ಸನ್ಮಾನಿಸಿ ಬಹುಮಾನ ವಿತರಿಸಿದರು. ಗ್ರಾ.ಪಂ. ಅಧ್ಯಕ್ಷ ಪೈಗಂಬರ ಮುಲ್ಲಾ, ಶ್ರೀಮಂತರಾವ ದೇಶಮುಖ ಹಾಗೂ ಚಿದಾನಂದ ಆವಗೊಂಡ ವೇದಿಕೆಯಲ್ಲಿದ್ದರು.
ಶಿಕ್ಷಕರಾದ ಆರತಿ ಗಾಣಿಗೇರ, ಎ.ಆರ್. ತುಬಾಕೆ, ಎಸ್.ಎಸ್. ಜತ್ತಿ, ಎಸ್.ಎಂ. ಕುಂಬಾರ, ರಿಯಾಜ್ ಮುಜಾವರ, ಸಾವಿತ್ರಿ ಅಂಗಡಿ, ಚಂದ್ರಶೇಖರ ಅರವತ್ತು, ಪ್ರಭಾವತಿ ಐಗಳಿ, ಕಲ್ಲಪ್ಪಾ ಕಾಂಬಳೆ, ಎನ್.ಬಿ. ಬಿರಾದಾರ, ಬಿಡದಿ ಮೈಕೊ ಕನ್ನಡ ಬಳಗದ ಪದಾಧಿಕಾರಿ ರಾಮತೀರ್ಥ ಕೃಷ್ಣಮೂರ್ತಿ, ಸಿದ್ಧರಾಮ ಹಣಮಶೆಟ್ಟಿ, ರಮೇಶ ಮರನೂರ, ಸಂಗಣ್ಣ ಸಾಹುಕಾರ, ಚೇತನ, ವೀರಭದ್ರಪ್ಪ ಮತ್ತಿತರರಿದ್ದರು.
ವಿಜಯಪುರ ತಾಲೂಕಿನ ಜಂಬಗಿಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಬಿಡದಿ ಮೈಕೊ ಕನ್ನಡ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಹಾಸಿಂಪೀರ ವಾಲಿಕಾರ, ಮಂಜುನಾಥ, ಶ್ರೀಮಂತರಾವ ದೇಶಮುಖ ಮತ್ತಿತರರಿದ್ದಾರೆ.