ಬಾಳೆ ಗ್ರಾಪಂ ಉಪಾಧ್ಯಕ್ಷ ಪ್ರಿಯೇಶ್ ಅವರನ್ನು ಅಭಿನಂದಿಸಲಾಯಿತು. ರತ್ನಮ್ಮ, ಮಮತಾ, ತಿಮ್ಮಣ್ಣ, ಪ್ರೇಮಾ, ಶಾಂತಲಾ ಇತರರಿದ್ದರು.  
ಜಿಲ್ಲೆ

ಬಾಳೆ ಗ್ರಾಪಂಗೆ ಪ್ರಿಯೇಶ್ ಉಪಾಧ್ಯಕ್ಷ

ಎನ್.ಆರ್.ಪುರ: ಬಾಳೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಪ್ರಿಯೇಶ್ ಸೀಗುವಾನಿ ಅವಿರೋಧವಾಗಿ ಆಯ್ಕೆಯಾದರು.

ತಿಮ್ಮಣ್ಣ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕಾಗಿ ಶುಕ್ರವಾರ ಪ್ರಿಯೇಶ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಚುನಾವಣಾಧಿಕಾರಿಯಾಗಿ ಬಿ.ವೀರಪ್ಪ ಕಾರ್ಯನಿರ್ವಹಿಸಿದರು. ನಂತರ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ರತ್ನಮ್ಮ, ಸದಸ್ಯರಾದ ಮಮತಾ, ಪೂಜಾ, ತಿಮ್ಮಣ್ಣ, ಶಾಂತಮ್ಮ, ಮುಖಂಡ ಸಜಿ, ಪಿಡಿಒ ಪ್ರೇಮಾ, ಕಾರ್ಯದರ್ಶಿ ಶಾಂತಲಾ ಇತರರಿದ್ದರು.