ಪುತ್ತೂರು: ಬೆಟ್ಟಂಪಾಡಿಯ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ವತಿಯಿಂದ ವಿಜೃಂಭಣೆಯ ಶ್ರೀಕೃಷ್ಣ ಜನ್ಮಾಷ್ಟಮಿ ಮಂಗಳವಾರ ನಡೆಯಿತು.
ಬೆಳಗ್ಗೆ ಬೆಟ್ಟಂಪಾಡಿಯ ಶ್ರೀ ಅಯ್ಯಪ್ಪ ಭಜನಾಮಂದಿರದಲ್ಲಿ ಎಲ್‌ಕೆಜಿಯಿಂದ ಎರಡನೇ ತರಗತಿವರೆಗಿನ ಶ್ರೀಕೃಷ್ಣ ಹಾಗೂ ರಾಧೆಯ ವೇಷಧಾರಿಗಳು, ವಿದ್ಯಾರ್ಥಿಗಳು ಹಾಗೂ ಪಾಲಕರು ಸೇರಿ ಶ್ರೀಕೃಷ್ಣನನ್ನು ತೊಟ್ಟಿಲಿನಲ್ಲಿ ಹಾಕುವ ಕಾರ್ಯಕ್ರಮದ ಬಳಿಕ ಪುಟಾಣಿ ಕೃಷ್ಣ-ರಾಧೆಯರಿಗೆ ಆರತಿ ಬೆಳಗಿ ತಿಲಕ ಇಟ್ಟು ಸ್ವಾಗತಿಸಲಾಯಿತು.
ಬಳಿಕ ನಡೆದ ಮೆರವಣಿಗೆಯನ್ನು ಪಾರ ಸುಬ್ರಹ್ಮಣ್ಯ ಭಟ್ ಉದ್ಘಾಟಿಸಿದರು. ವಿಜೃಂಭಣೆಯ ಮೆರವಣಿಗೆ ಶಾಲೆಯವರೆಗೆ ಸಾಗಿ ಶಾಲೆಯಲ್ಲಿ ಪಾಲಕರಿಗೆ ವಿವಿಧ ಸ್ಪರ್ಧೆ ನಡೆಸಲಾಯಿತು. ಮಧ್ಯಾಹ್ನ ಸಮಾರೋಪ ನಡೆಯಿತು. ಅಷ್ಟಮಿ ಆಚರಣೆ ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಹೊಳ್ಳ ಪಾರ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಪುತ್ತೂರಿನ ರೋಟರಿ ಕ್ಲಬ್‌ನ ಅಧ್ಯಕ್ಷ ಸುರೇಶ್ ಪಿ, ಉದ್ಯಮಿ ಸಂಪತ್ ಕುಮಾರ್, ವರದರಾಜ್ ನಾಯಕ್, ಸಂತೋಷ್ ಕುಲಾಲ್, ದಿಲೀಪ್ ರಾವ್, ಸಂಸ್ಥೆಯ ಅಧ್ಯಕ್ಷ ರಂಗನಾಥ ರೈ ಗುತ್ತು ಭಾಗವಹಿಸಿದರು.
ಮುಖ್ಯಶಿಕ್ಷಕ ರಾಜೇಶ್ ನೆಲ್ಲಿತ್ತಡ್ಕ ಸ್ವಾಗತಿಸಿದರು. ಭವ್ಯ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಪೋಷಕರು ಸಹಕರಿಸಿದರು.