ಕೊಟ್ಟೂರು: ಹೆತ್ತವರು ನಿಮ್ಮ ಬಗ್ಗೆ ಹಲವು ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಅದಕ್ಕೆ ಚ್ಯುತಿಯಾಗದಂತೆ ಕಷ್ಟಪಟ್ಟು ಓದಬೇಕು ಎಂದು ವಿದ್ಯಾರ್ಥಿಗಳಿಗೆ ಜಿಪಂ ಮಾಜಿ ಸದಸ್ಯ ಎಂ.ಎಂ.ಜೆ. ಹರ್ಷವರ್ಧನ ಸಲಹೆ ನೀಡಿದರು.
ಪಟ್ಟಣದ ಗೊರ್ಲಿ ಶರಣಪ್ಪ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ವಿವಿಧ ಸಂಘಗಳ ಚಾಲನೆ ಮತ್ತು ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸರ್ಕಾರ ಹಲವು ಸೌಲಭ್ಯಗಳನ್ನು ಕಲ್ಪಿಸಿದ್ದು, ಅದನ್ನು ಸದುಪಯೋಗ ಪಡಿಸಿಕೊಂಡು ಶ್ರಮಪಟ್ಟು ಓದಿ ಉನ್ನತ ವ್ಯಾಸಂಗ ಮಾಡಬೇಕು ಎಂದರು.
ನಿವೃತ್ತ ಪ್ರಾಚಾರ್ಯೆ ಡಾ.ಕುಸುಮಾ ಸಜ್ಜನ್ ಮಾತನಾಡಿ, ವಿದ್ಯಾರ್ಥಿಗಳು ಸ್ಪಷ್ಟವಾದ ಗುರಿ ಇಟ್ಟುಕೊಂಡು ಮುನ್ನಡೆಯಬೇಕು ಎಂದರು. ಮೈದೂರು ಗೀತಮ್ಮ , ನಾಗಜ್ಜ ಮತ್ತು ಕೊಟ್ರೇಶ ಹೆಸರಿನ ದತ್ತಿ ಬಹುಮಾನ ತಲಾ 5 ಸಾವಿರ ರೂಪಾಯಿಯನ್ನು 13 ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಪ್ರಾಚಾರ್ಯ ಡಾ.ಜಿ.ಸೋಮಶೇಖರ್, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿಶ್ ಮಂಜಣ್ಣ, ಪ್ರಾಚಾರ್ಯ ಬಿ.ಪಿ. ತಿಪ್ಪೇಸ್ವಾಮಿ, ಪ್ರಮುಖರಾದ ಉಮಾಶಂಕರ್, ಕಾಲೇಜು ಸಿಡಿಸಿ ಸದಸ್ಯ ವಿ.ಕೊಟ್ರೇಶ, ಪಾರ್ವತಿ, ಗೋನಾಳ ಕೊಟ್ರೇಶ, ರೇಣುಕಾಸ್ವಾಮಿ, ಉಪನ್ಯಾಸಕರಾದ ಜಿ.ಶಿವರಾಜ, ಎಂ.ಜಯಣ್ಣ, ಎಚ್.ಎಂ.ನಾಗಯ್ಯ, ಗುರುಪ್ಪನಾಯಕ, ಕರಿಬಸಪ್ಪ, ನಾಗರಾಜ, ಮಗ್ಗದ ನಾಗರಾಜ ಇತರರಿದ್ದರು.