ಕಳಸ: ತಾಲೂಕಿನ ಹಿರೇಬೈಲು ಗ್ರಾಮದಲ್ಲಿದ್ದ ಖಾಸಗಿ ಪಾಲಿಕ್ಲಿನಿಕ್‌ಗೆ ಮೂಡಿಗೆರೆ ತಾಲೂಕು
ವೈದ್ಯಾಧಿಕಾರಿಗಳು ಬೀಗ ಜಡಿದಿದ್ದಾರೆ.ಕಳಸ ಪಿಎಸ್‌ಐ ಚಂದ್ರಶೇಖರ್, ಇಡಕಣಿ ಗ್ರಾಮಪಂಚಾಯಿತಿ ಪಿಡಿಒ ಪ್ರಕಾಶ್ ಜೊತೆಗೆ ಖಾಸಗಿಕ್ಲಿನಿಕ್‌ಗೆ ಭೇಟಿ ನೀಡಿದ ತಾಲೂಕು ವೈದ್ಯಾಧಿಕಾರಿ ಹರೀಶ್ ಬಾಬು ಖಾಸಗಿ ಪಾಲಿಕ್ಲಿನಿಕ್‌ನಲ್ಲಿ ವೈದ್ಯ
ವೃತ್ತಿ ನಡೆಸಲು ಸೂಕ್ತ ದಾಖಲೆಗಳನ್ನು ಕೇಳಿದ್ದಾರೆ. ಈ ಸಂದರ್ಭದಲ್ಲಿ ಕ್ಲಿನಿಕ್‌ನಲ್ಲಿದ್ದ
ಸಂಬಂಧಪಟ್ಟವರಲ್ಲಿ ಕೆಎಂಸಿ ನೋಂದಿತ ವೈದ್ಯರು ಇಲ್ಲದಿರುವುದು, ದರ ಪಟ್ಟಿ ಲಗತ್ತಿಸದೆ
ಇರುವುದು, ಅನ್ಯ ರೀತಿಯ ಪ್ರಕಾರದ ವೈದ್ಯಕೀಯ ಸೇವೆಗಳನ್ನು ನೀಡುತ್ತಿರುವುದು, ಜೈವಿಕ
ತ್ಯಾಜ್ಯ ವಿಲೇವಾರಿ ಸೂಕ್ತ ರೀತಿಯಲ್ಲಿ ಮಾಡದಿರುವುದು ಕಂಡು ಬಂದಿದ್ದರಿಂದ ಕೆಪಿಎಂಇ
ಕಾಯ್ದೆಗಳು ಉಲ್ಲಂಘನೆಯಾದ ಹಿನ್ನೆಲೆಯಲ್ಲಿ ಕ್ಲಿನಿಕ್‌ಗೆ ಬೀಗ ಹಾಕಲಾಗಿದೆ.
ಹಿರೇಬೈಲ್‌ನಲ್ಲಿರುವ ಸ್ಪಂದನ ಪಾಲಿಕ್ಲಿನಿಕ್ ಬಗ್ಗೆ ಇಡಕಣಿ ಗ್ರಾಮ ಪಂಚಾಯಿತಿ ಪಿಡಿಒಗೆ ದೂರುಸಲ್ಲಿಕೆ ಮಾಡಲಾಗಿತ್ತು.