ಜಿಲ್ಲೆ

ಸೂಕ್ಷ್ಮ ವಲಯಗಳಲ್ಲಿ ಖಾಸಗಿ ಡ್ರೋನ್ ನಿಷೇಧ

ಶಿವರಾಜ.ಎಂ

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಜಿಲ್ಲೆಯ ಸೂಕ್ಷ್ಮವಲಯಗಳಲ್ಲಿ ಖಾಸಗಿ ಡ್ರೋನ್ ಹಾರಾಟ ಹಾಗೂ ಇನ್ನಿತರ ಚಟುವಟಿಕೆಗಳನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ ಬಸವರಾಜು ತಿಳಿಸಿದ್ದಾರೆ.

ಭಯೋತ್ಪಾದಕರು, ದೇಶ ವಿರೋಧಿಗಳು ಡ್ರೋನ್‌ಗಳು, ರಿಮೋಟ್ ಕಂಟ್ರೋಲ್ಡ್ ಮೈಕ್ರೋ-ಲೈಟ್ ಏರ್ಕ್ರ್‌ಟಾಗಳು, ಪ್ಯಾರಿ-ಗ್ಲೈಡರ್‌ಗಳನ್ನು ಬಳಸಿಕೊಂಡು ದಾಳಿಯ ಮೂಲಕ ಸಾರ್ವಜನಿಕ ಆಸ್ತಿ-ಪಾಸ್ತಿ ನಾಶಪಡಿಸಿ ಕಾನೂನು ಸುವ್ಯವಸ್ಥೆಗೆ ಭಂಗ ಉಂಟುಮಾಡುವ ಸಾಧ್ಯತೆಯಿರುವುದರಿಂದ ಈ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ ಎಂದು ದೇವನಹಳ್ಳಿಯ ಜಿಲ್ಲಾಡಳಿತಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಭಾರತ ಮತ್ತು ಪಾಕಿಸ್ಥಾನ ದೇಶಗಳ ನಡುವಿನ ಬಿಗುವಿನ ವಾತಾವರಣ ಈಗ ಶಮನಗೊಂಡಿದೆ. ಅದರೂ ತುರ್ತು ಸಂದರ್ಭಗಳಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವಂತಹ ಸೂಕ್ಷ್ಮವಲಯಗಳನ್ನು ಗುರುತಿಸಿ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ವತಿಯಿಂದ ಭದ್ರತಾ ಕಾಳಜಿಗಳ ದೃಷ್ಟಿಯಿಂದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಲಾಗಿದೆ ಎಂದು ವಿವರಿಸಿದ್ದಾರೆ.

ಡ್ರೋನ್ ಬಳಕೆಗೆ ಸೂಚನೆ: ಕೈಗಾರಿಕಾ ಮತ್ತು ವಾಣಿಜ್ಯ ಸಂಸ್ಥೆಗಳಿಗೆ ಭದ್ರತೆಯನ್ನು ಒದಗಿಸುವ ಎಲ್ಲ ಖಾಸಗಿ ಭದ್ರತಾ ಏಜೆನ್ಸಿಗಳಿಗೆ ಮಾಹಿತಿ ನೀಡಲಾಗಿದ್ದು ಕಣ್ಗಾವಲು ಅಥವಾ ಇತರ ಉದ್ದೇಶಗಳಿಗಾಗಿ ಡ್ರೋನ್‌ಗಳನ್ನು ನಿಯೋಜಿಸುವುದನ್ನು ತಪ್ಪಿಸಲು ಸಲಹೆಗಳನ್ನು ಸೂಚಿಸಲಾಗಿದೆ.

ಪೊಲೀಸ್ ಇಲಾಖೆಗೆ ಸೂಚನೆ: ಸಂಭವನೀಯ ವಿಧ್ವಂಸಕ ಕೃತ್ಯಗಳನ್ನು ತಡೆಗಟ್ಟಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್ ಇಲಾಖೆಗೆ ಭದ್ರತೆಯನ್ನು ಒದಗಿಸಲು ತಿಳಿಸಿದೆ. ಜತೆಗೆ ಅಂತಹ ಚಟುವಟಿಕೆಗಳ ಮೇಲೆ ಕೆಲವು ನಿರ್ಬಂಧಗಳನ್ನು ಹಾಕುವುದು ಅಗತ್ಯವಾಗಿದೆ. ಜಿಲ್ಲಾ ಅಗ್ನಿಶಾಮಕದಳ ತುರ್ತು ಸಂದರ್ಭಗಳಲ್ಲಿ ಸಿದ್ಧರಿರಬೇಕು. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಅಗತ್ಯ ಔಷಧಿಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು ಮತ್ತು ವಿಶೇಷವಾಗಿ ನಾಗರಿಕರಿಗೆ ಯಾವುದೇ ತೊಂದರೆ ಮತ್ತು ಅಪಘಾತಗಳನ್ನು ನಿರ್ವಹಿಸಲು ಸನ್ನದ್ಧವಾಗಿರಲು ಜಾಗೃತಿ ಮೂಡಿಸಲಾಗುವುದು ಎಂದು ಡಿಸಿ ತಿಳಿಸಿದ್ದಾರೆ.

ನಕಲಿ ಸುದ್ದಿಗೆ ಕಡಿವಾಣ: ಯಾವುದೇ ನಕಲಿ ಅಥವಾ ಸುಳ್ಳು ಸುದ್ದಿ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸರಣ, ಬಿತ್ತರವಾಗುವ ಸಂಗತಿಗಳನ್ನು ತಕ್ಷಣವೇ ನೈಜ ಸಂಗತಿಯೊಂದಿಗೆ ಪರಿಶೀಲಿಸಿ ಕ್ರಮಕೈಗೊಂಡು, ಇವುಗಳ ಮೂಲವನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ.ಬಸವರಾಜು ತಿಳಿಸಿದ್ದಾರೆ. ಸಮುದಾಯಗಳ ಮುಖಂಡರು ಮತ್ತು ಇತರ ಪ್ರಮುಖ ನಾಗರಿಕರೊಂದಿಗೆ ವಾಟಾಪ್ ಗುಂಪುಗಳು ಸಕ್ರಿಯವಾಗಿರಬೇಕು, ಯಾವುದೇ ವದಂತಿಗಳು ಕಂಡು ಬಂದಾಗ ತಕ್ಷಣವೇ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಂಟ್ರೋಲ್ ರೂಂ. ಸಂಖ್ಯೆ 080-28388005 ಗೆ ಸಂಪರ್ಕಿಸಿ ಮಾಹಿತಿ ತಿಳಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

ಏರ್‌ಪೋರ್ಟ್ ವ್ಯಾಪ್ತಿಯಲ್ಲಿ ಅಲರ್ಟ್: ದೇವನಹಳ್ಳಿ ತಾಲೂಕು ವ್ಯಾಪ್ತಿಯಲ್ಲಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಹೈಅಲರ್ಟ್ ೋಷಿಸಲಾಗಿದೆ. ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಂತೆ ಗ್ರಾಮಗಳು, ವಾಣಿಜ್ಯ ಸಂಕೀರ್ಣಗಳು ಸಹ ಇದ್ದು, ಇಂಥ ವಲಯವನ್ನು ಸೂಕ್ಷ್ಮ ವಲಯ ಎಂದು ವಿಶೇಷವಾಗಿ ಗುರುತಿಸಲಾಗಿದೆ. ಇಲ್ಲಿ ಯಾವುದೇ ರೀತಿಯ ಡ್ರೋನ್ ಹಾರಾಟ ಅಥವಾ ಡ್ರೋನ್ ಚಟುವಟಿಕೆಗಳು ಕಂಡುಬಂದರೆ ತಕ್ಷಣ ಕ್ರಮಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲ ವ್ಯಾಪ್ತಿಯಲ್ಲಿನ ಸೂಕ್ಷ್ಮವಲಯಗಳು

ದೇವನಹಳ್ಳಿ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಇಂಡಿಯನ್ ಆಯಿಲ್ ಸ್ಕೈಟ್ಯಾಂಕಿಂಗ್ಲಿ

ದೊಡ್ಡಬಳ್ಳಾಪುರ: ಮುಶಾಶಿ ಆಟೋ ಪಾರ್ಟ್ ಪ್ರೈ. ಲಿಮಿಟೆಡ್

ಹೊಸಕೋಟೆ: ಐಇಔ - ಇಂಡೇನ್ ಬಾಟ್ಲಿಂಗ್ ಪ್ಲಾಂಟ್ ಆಇಔ, ಐಇಔ, ಏಇಔ, ಋ್ಕಿಔ

ನೆಲಮಂಗಲ: ಜ್ಯೋತಿಗ್ಯಾಸ್ ಪ್ರೈ ಲಿಮಿಟೆಡ್, ಇಂಡೋಗ್ಯಾಸ್, ಟೋಟಲ್ ಆಯಿಲ್ ಇಂಡಿಯಾ ಪ್ರೈ. ಲಿಮಿಟೆಡ್, ಏಜಿಸ್ ಗ್ಯಾಸ್, ಎಲ್‌ಪಿಜಿ ಪ್ರೈವೇಟ್ ಲಿಮಿಟೆಡ್, ಸ್ನೇಹಾ ಪೆಟ್ರೋಲಿಯಂ ಪ್ರೈ. ಲಿಮಿಟೆಡ್, ಜಿಂದಾಲ್ ಅಲ್ಯೂಮಿನಿಯಂ ಲಿಮಿಟೆಡ್ (ರೋಲಿಂಗ್ ಮಿಲ್ ವಿಭಾಗ), ಜ್ಯೋತಿಗ್ಯಾಸ್ ಪ್ರೈ. ಲಿಮಿಟೆಡ್