ಮಂಗಳೂರು: ಇವರು ಪೂರ್ಣಾವಧಿ ಕೃಷಿಕರಲ್ಲ. ಆದರೆ ಸುಮಾರು 15 ಸೆಂಟ್ಸ್ ಜಮೀನಿನಲ್ಲಿ ಯಥೇಚ್ಛ ತರಕಾರಿ ಬೆಳೆಯುತ್ತಾರೆ. ಮನೆ ಅಗತ್ಯಕ್ಕೆ ಬಳಸಿ ದಿನಂಪ್ರತಿ ಸರಾಸರಿ 500 ರೂ. ತರಕಾರಿ ಮಾರಾಟ ಮಾಡುತ್ತಾರೆ. ರಸಗೊಬ್ಬರ ಪೂರೈಸುವ ಕಂಪನಿಯಲ್ಲಿ ದುಡಿಯುತ್ತಾರೆ. ಆದರೆ ಮನೆ ತೋಟಕ್ಕೆ ಸಾವಯವ ಗೊಬ್ಬರವನ್ನೇ ಬಳಸುತ್ತಾರೆ. ಇದು ಬೈಕಂಪಾಡಿ ಶಿಪ್ಪಿಂಗ್ ಕಂಪನಿಯಲ್ಲಿ ದುಡಿಯುತ್ತಿರುವ ಲಿಖಿತ್ ಸಾಲ್ಯಾನ್ ಎಂಬುವರ ತರಕಾರಿ ತೋಟದ ಯಶೋಗಾಥೆ.
ಸುರತ್ಕಲ್ ಗೋವಿಂದದಾಸ್ ಕಾಲೇಜು ಸಮೀಪದ ನಿವಾಸಿ ಲಿಖಿತ್, ಮೂರು ವರ್ಷಗಳ ಹಿಂದೆ ಸ್ವಂತ ಸಂತೋಷಕ್ಕೆ ತರಕಾರಿ ಬೆಳೆಸುತ್ತೇನೆ ಎಂದು ಹೊರಟಾಗ ಕುಟುಂಬ ವಲಯ, ಸ್ನೇಹಿತರಲ್ಲಿ ನಕ್ಕವರೇ ಹೆಚ್ಚು. ಆದರೆ ಇಂದು ಅನುಭವಿ ಕೃಷಿಕರೂ ಹುಬ್ಬೇರಿಸುವಂತೆ ಲಿಖಿತ್ ತರಕಾರಿ ತೋಟ ಬೆಳೆಸಿದ್ದಾರೆ. ಹತ್ತಿರದ ಮನೆಯ ಕೃಷಿಕ ಮ್ಯಾಕ್ಸಿಂ ರೋಡ್ರಿಗಸ್ ಪ್ರೇರಣೆ ಲಿಖಿತ್ ಅವರನ್ನು ತರಕಾರಿ ತೋಟ ಬೆಳೆಸಲು ಪ್ರೇರೇಪಿಸಿತು. ಕೃಷಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡಿರುವವರು ಇರುವ ‘ಎನಿಟೈಮ್ ವೆಜಿಟೇಬಲ್’ ವಾಟ್ಸಪ್ ಗ್ರೂಪ್‌ನಲ್ಲಿ ಕಾಲಕಾಲ ದೊರೆಯುತ್ತಿದ್ದ ಮಾರ್ಗದರ್ಶನ ಅವರನ್ನು ಹುರಿದುಂಬಿಸಿತು.
ಮಗಳ ಶಾಲಾ ಶುಲ್ಕ ನಿಧಿ: ಕೃಷಿ ಚಟುವಟಿಕೆಗಳ ಪಕ್ಕಾ ಲೆಕ್ಕ ಬರೆದಿಟ್ಟುಕೊಳ್ಳುವ ಅಭ್ಯಾಸ ಲಿಖಿತ್ ಹೊಂದಿದ್ದಾರೆ. ಮುಂದಿನ ವರ್ಷ ಎಲ್‌ಕೆಜಿ ಸೇರಲಿರುವ ಮಗಳ ಶಾಲಾ ಶುಲ್ಕ 39 ಸಾವಿರ ರೂ. ತರಕಾರಿ ಬೆಳೆಯಲ್ಲೇ ಭರಿಸುವ ಗುರಿ ಲಿಖಿತ್ ಕುಟುಂಬದ್ದು. ತರಕಾರಿ ಬೆಳೆಯಲ್ಲಿ ಎಲ್ಲರೂ ಉತ್ಸಾಹದಿಂದ ತೊಡಗಿಕೊಳ್ಳಲು ಈ ಟಾಸ್ಕ್ ಎನ್ನುತ್ತಾರೆ. ಗಿಡಗಳ ನಿರ್ವಹಣೆಗೆ ಉಸ್ತುವಾರಿಗಳನ್ನು ನೇಮಿಸಲಾಗಿದೆ. ಬೆಂಡೆಕಾಯಿ, ಮುಳ್ಳುಸೌತೆ ನಿರ್ವಹಣೆ ಜವಾಬ್ದಾರಿ ಅವರ ಅಪ್ಪ, ಹಿರಿಯ ರಂಗಕರ್ಮಿ ಗಿರಿಯಪ್ಪ ಇಡ್ಯಾ ಅವರದು. ಬಸಳೆ ಜವಾಬ್ದಾರಿ ಪತ್ನಿಗೆ, ಹೀರೇಕಾಯಿ ಆರೈಕೆ ಜವಾಬ್ದಾರಿ ನನ್ನದು ಎನ್ನುತ್ತಾರೆ ಲಿಖಿತ್.
ತರಕಾರಿ ಬೆಳೆ ನಿತ್ಯ ನಿರ್ದಿಷ್ಟ ಆದಾಯದ ಜತೆ ಹೆಚ್ಚಿನ ಸಂತೋಷ ತಂದಿದೆ. ಕೃಷಿ ವಲಯದ ತಜ್ಞರು, ಸ್ನೇಹಿತರ ಮಾರ್ಗದರ್ಶನ, ಮನೆಮಂದಿಯ ಸಹಕಾರದಿಂದ ಇದು ಸಾಧ್ಯವಾಗಿದೆ. ಲಿಖಿತ್ ಸಾಲ್ಯಾನ್ ಕೃಷಿಕ