ವಿರಾಜಪೇಟೆ: ಖಾಸಗಿ ಬಸ್ ಕಾರ್ಮಿಕರ ಸಂಘ ವಿರಾಜಪೇಟೆ ಅಧ್ಯಕ್ಷರಾಗಿ ಕುಂಬೆಯಂಡ ಸುರೇಶ್ ದೇವಯ್ಯ, ಪ್ರಧಾನ ಕಾರ್ಯದರ್ಶಿಯಾಗಿ ಜ್ಯೂಡಿ ವಾಜ್ ಆಯ್ಕೆಗೊಂಡರು.
ನಗರ ಖಾಸಗಿ ಬಸ್ ನಿಲ್ದಾಣ ಸಮೀಪದ ಸ್ವಾಗತ್ ಕಟ್ಟಡ ಸಭಾಂಗಣದಲ್ಲಿ ಭಾನುವಾರ ನಡೆದ ಮಹಾಸಭೆಯಲ್ಲಿ ಆಯ್ಕೆ ಮಾಡಲಾಗಿದೆ. ಸಂಘದ ಗೌರವಾಧ್ಯಕ್ಷರಾಗಿ ಅಲ್ಲಂಡ ಕಸ್ತೂರಿ ಚೆಂಗಪ್ಪ, ಉಪಾದ್ಯಕ್ಷರಾಗಿ ದಿನೇಶ್ ಕಾವೇರಪ್ಪ, ಕೋಶಾಧಿಕಾರಿಗಳಾಗಿ ದಿನೇಶ್ ವಿ.ಎ. ಆಯ್ಕೆಗೊಂಡರು. ಮಹೇಶ್.ಎಂ.ಕೆ., ಅಜಯ್ ಕೆ.ಇ., ಎನ್.ಪಿ.ದಿನೇಶ್ ನಾಯರ್, ಬಿ.ವಿ.ವಿನಂತು ನಾಯಕ್, ಕೆ.ಎನ್.ಜೀವನ್, ಕುಪ್ಪಂಡ ಪ್ರಸಾದ್ ದೇವಯ್ಯ, ರಂಜು ಎಸ್. ಆಡಳಿತ ಮಂಡಳಿಯ ಸದಸ್ಯರಾಗಿ ಆಯ್ಕೆಯಾದರು.
ಸಭೆಯಲ್ಲಿ ಸಂಘದ ಗೌರವಾಧ್ಯಕ್ಷರಾಗಿದ್ದ ಬಿ.ಆರ್.ಗಣೇಶ್ ಮತ್ತು ಮೂರ್ನಾಡು ಬಸ್ ಚಾಲಕ ಅಬ್ದುಲ್ ನಾಜೀರ್ ಅವರಿಗೆ ಸಂತಾಪ ಸೂಚಿಸಲಾಯಿತು. ಸದಸ್ಯರಾದ ಬಿ.ವಿ.ಹೇಮಂತ್ ಅವರು ಸಂಘದ ಸದಸ್ಯರಿಗೆ ಆರೋಗ್ಯ ದತ್ತಿ ನಿಧಿ ಮತ್ತು ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ಸಂಘದ ಸದಸ್ಯರು ಹಾಜರಿದ್ದರು.