raichur 
ಜಿಲ್ಲೆ

ಖಾಸಗಿ ಬಸ್‌ಗೆ ಬೆಂಕಿ 20 ಜನ ಸಜೀವ ದಹನ -ಆಂಧ್ರ ಪ್ರದೇಶದ ಚಿನ್ನಟೆಕೋರು ಗ್ರಾಮದ ಬಳಿ ಘಟನೆ

ರಾಯಚೂರು (ಕರ್ನೂಲ್) ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್‌ಗೆ ಬೆಂಕಿ ಹೊತ್ತಿಕೊಂಡು 20 ಜನರು ಸಜೀವ ದಹನಗೊಂಡಿರುವ ಘಟನೆ ಆಂಧ್ರ ಪ್ರದೇಶದ ಚಿನ್ನಟೆಕೋರು ಗ್ರಾಮದ ಬಳಿ ಶುಕ್ರವಾರ ಬೆಳ್ಳಂಬೆಳಗೆ ನಡೆದಿದೆ.

ಖಾಸಗಿ ಕಾವೇರಿ ಸ್ಲೀಪರ್ ಬಸ್ ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತಿತ್ತು. ಈ ವೇಳೆ ದಾರಿಯಲ್ಲಿ ಬೈಕ್ ಸವಾರ ಅಡ್ಡ ಬಂದ ಪರಿಣಾಮ ಬಸ್ ಡಿಕ್ಕಿ ಹೊಡೆದು ಸುಮಾರು 400 ಮೀಟರ್ ದೂರ ಎಳೆದುಕೊಂಡ ಹೋಗಿದ್ದ ಪರಿಣಾಮ ಬೈಕ್‌ನ ಪೆಟ್ರೋಲ್ ಟ್ಯಾಂಕ್ ಸೋರಿಕೆಯಾಗಿ ಏಕಾಏಕಿ ಬಸ್‌ನಲ್ಲಿ ಭಾರೀ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡು ಧಗ ಧಗ ಹೊತ್ತಿ ಉರಿದಿದೆ. ಇದರಿಂದ ಪ್ರಯಾಣಿಕರು ತಕ್ಷಣಕ್ಕೆ ಹೊರ ಬರಲು ಆಗಿಲ್ಲ. ಬಸ್‌ನಲ್ಲಿದ್ದ 42 ಪ್ರಯಾಣಿಕರ ಪೈಕಿ 20 ಜನರು ಸಜೀವ ದಹನವಾಗಿದ್ದಾರೆ. 12 ಜನ ಪ್ರಯಾಣಿಕರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಬಸ್‌ಗೆ ದೊಡ್ಡ ಪ್ರಮಾಣದಲ್ಲಿ ಬೆಂಕಿ ಹೊತ್ತಿದ್ದರಿಂದ ಪ್ರಯಾಣಿಕರು ಹೊರಬರಲು ಹರಸಾಹಸ ಪಟ್ಟಿದ್ದಾರೆ. ಕೆಲವರು ಎಮರ್ಜೆನ್ಸಿ ಡೋರ್‌ನಿಂದ ಹೊರ ಬಂದರೆ, ಇನ್ನು ಕೆಲವರು ಕಿಟಕಿಯ ಗ್ಲಾಸ್ ಒಡೆದು ಹೊರ ಬಂದಿದ್ದಾರೆ. ಸದ್ಯ ಘಟನೆಯಲ್ಲಿ ಗಾಯಗೊಂಡವರನ್ನು ಕರ್ನೂಲ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸೀಟ್ ನಂಬರ್ ಆಧಾರಿಸಿ ಮೃತದೇಹಗಳ ರವಾನೆ

ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಎಫ್‌ಎಸ್‌ಎಲ್ ತಂಡ ಆಗಮಿಸಿ ಸ್ಥಳ ಮಹಜರು ಪ್ರಕ್ರಿಯೆ ನಡೆಸಿ ಆಯಾ ಸೀಟ್ ನಂಬರ್ ಆಧರಿಸಿ ಮೃತದೇಹಗಳನ್ನ ಪ್ರತ್ಯೇಕವಾಗಿ ಶಿಫ್ಟ್ ಮಾಡಕಲಾಗಿದ್ದು, ಆಯಾ ಸೀಟ್ಗಳಲ್ಲಿ ಪತ್ತೆಯಾದ ಮೃತದೇಹಗಳ ತುಂಡುಗಳು, ವಸ್ತುಗಳನ್ನು ಸಂಗ್ರಹಿಸಿದ ನಂತರ ವೈದ್ಯರುಮರಣೋತ್ತರ ಪರೀಕ್ಷೆ ಪ್ರಕ್ರಿಯೆ ನಡೆಸಿದರು. ಕರ್ನೂಲ್ ಜಿಲ್ಲಾಡಳಿತದಿಂದ ಮೃತ ಪ್ರಯಾಣಿಕರ ಮಾಹಿತಿಗಾಗಿ ಜಿಲ್ಲಾಧಿಕಾರಿ ಎ.ಸಿರಿ ನೇತೃತ್ವದಲ್ಲಿ ಸಹಾಯವಾಣಿ ಪ್ರಾರಂಭ ಮಾಡಿದ್ದಾರೆ.

ಮುಗಿಲು ಮುಟ್ಟಿದ ಆಕ್ರಂದನ

ಕಾವೇರಿ ಬಸ್ ಅಗ್ನಿ ಅವಘಡ ಮಾಹಿತಿ ತಿಳಿಯುತ್ತಿದ್ದಂತೆ ಮೃತರ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದ್ದು, ಹೈದ್ರಾಬಾದ್ ಸಮೀಪದ ಹಳ್ಳಿಯ ಸಮೀಪದ ಯುವ ಮೇಘನಾಥ ಎನ್ನುವವರು ಕಳೆದ 5 ತಿಂಗಳ ಹಿಂದೆ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದ ದೀಪಾವಳಿ ಹಬ್ಬದ ನೀಮಿತ್ತ ಸ್ವಗ್ರಾಮಕ್ಕೆ ಬಂದಿದ್ದ ಮೇಘನಾಥ

ದೀಪಾವಳಿ ರಜೆ ಮುಗಿಸಿ, ವಾಪಾಸ್ ಹೋಗುವಾಗ ಅಗ್ನಿ ಅವಘಡದಲ್ಲಿ ಮೃತಪಟ್ಟಿಎರುವುದರಿಂದ ಮೃತನ ತಾಯಿ ಹಾಗೂ ಕುಟುಂಸ್ಥರು ಮಗನ ನೆನೆದು ಬಿಕ್ಕಿ ಬಿಕ್ಕಿ ಅಳುತ್ತಿರುವುದು ಕಂಡುಬಂದಿತ್ತು.

ಸ್ಥಳಕ್ಕೆ ಆಂಧ್ರ ಪ್ರದೇಶದ ಗೃಹ ಸಚಿವೆ ಅನಿತಾ ಹಾಗೂ ಎಸ್ಪಿ ವಿಕ್ರಾಂತ್ ಭೇಟಿ ಮಾಡಿ ಪರಿಶೀಲನೆ ನಡೆಸಿದರು.

ಹೈದ್ರಾಬಾದ್‌ನಿಂದ ಬೆಂಗಳೂರಿಗೆ ತೆರಳುವ ವೇಳೆ ಸುಮಾರು 3 ಗಂಟೆ ಸುಮಾರಿಗೆ ಮಾರ್ಗ ಮಧ್ಯದಲ್ಲಿ ಬಸ್‌ಗೆ ಏಕಾಏಕಿ ಬೆಂಕಿ ಹತ್ತಿರುವುದು ಕಂಡು ಬಂದಿತ್ತು. ಐದೇ ಸೆಕೆಂಡ್‌ನಲ್ಲಿ ಬಸ್‌ನ ಗ್ಲಾಸ್ ಹೊಡೆದು ಜೀವ ಉಳಿಸಿಕೊಂಡೆವು ಆದರೆ ಉಳಿದ ಯಾರನ್ನೂ ರಕ್ಷಸಲು ಆಗಲಿಲ್ಲ. ನನಗೆ ನೋವು ಕಾಡುತ್ತಿದೆ.

ಆಕಾಶ್ ಬಸ್‌ನಲ್ಲಿದ್ದ ಪ್ರಯಾಣಿಕ