ವಿಜಯಪುರ ನಗರದ ವಿದ್ಯಾವರ್ಧಕ ಸಂಘದ ಬನ್ಸಿಲಾಲ್ ವಿಠ್ಠಲದಾಸ ದರಬಾರ ಪದವಿ ಮಹಾವಿದ್ಯಾಲಯದ ಸಮಾಜ ಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಇತ್ತೀಚೆಗೆ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ, ಖೈದಿಗಳ ಬಗ್ಗೆ ಮಾಹಿತಿ ಪಡೆದುಕೊಂಡರು. 
ಜಿಲ್ಲೆ

ಸಮಾಜಶಾಸ್ತ್ರ ವಿಭಾಗದ ವಿದ್ಯಾರ್ಥಿಗಳಿಂದ ಜೈಲು ವೀಕ್ಷಣೆ

Vijayapura - Desk - Chinnayya Chinnayyanamath

ವಿಜಯಪುರ: ಜೈಲುಗಳಿಗೆ ಬನ್ನಿ ಎಂದು ಯಾರೂ ಸ್ವಾಗತ ಕೋರುವುದಿಲ್ಲ. ಎಲ್ಲರೂ ಅಪರಾಧ ಕೃತ್ಯಗಳಿಂದ ದೂರವಿದ್ದು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ವಿಜಯಪುರ ಕೇಂದ್ರ ಕಾರಾಗೃಹದ ಅಧಿಕ್ಷಕ ಡಾ. ಐ.ಜಿ. ಮ್ಯಾಗೇರಿ ಮನವಿ ಮಾಡಿದರು.

ವಿಜಯಪುರದ ವಿದ್ಯಾವರ್ಧಕ ಸಂಘದ ಬನ್ಸಿಲಾಲ್ ವಿಠ್ಠಲದಾಸ ದರಬಾರ ಪದವಿ ಮಹಾವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಕೇಂದ್ರ ಕಾರಾಗೃಹಕ್ಕೆ ಇತ್ತೀಚೆಗೆ ಭೇಟಿ ನೀಡಿ, ವೀಕ್ಷಿಸಿದ ನಂತರ ನಡೆದ ಸರಳ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಮಾಜದಲ್ಲಿ ಶಾಲೆಗಳಿವೆ. ಗ್ರಂಥಾಲಯಗಳಿವೆ. ತಮ್ಮದೇ ಆದ ಕುಟುಂಬಗಳಿವೆ. ದೇವಸ್ಥಾನಗಳಿವೆ. ಇವೆಲ್ಲಾ ಇರುವಾಗ ಸುಖಿ ಜೀವನ ನಡೆಸಬೇಕು. ಅದು ಬಿಟ್ಟು ಕೋಪದ ಕೈಗೆ ಬುದ್ದಿಕೊಟ್ಟು ಮಾಡುವ ಕಾರ್ಯಗಳು ಜೈಲುವಾಸ ಅನುಭವಿಸುವಂತಾಗುತ್ತದೆ. ಅದರ ಬದಲಿಗೆ ಕಾನೂನು ಕಾಪಾಡುವ ಕೆಲಸ ಮಾಡಿದರೆ ನಿಮ್ಮಿಂದ ಸಾಕಷ್ಟು ಜನರಿಗೆ ಉಪಯೋಗವಾಗುತ್ತದೆ ಎಂದರು.

ಸಮಾಜಶಾಸ್ತ್ರ ಉಪನ್ಯಾಸಕ ಜಗದೀಶ ಸಾತಿಹಾಳ, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ವಿದ್ಯಾಶ್ರೀ ಗಾಣಿಗೇರ, ಉಪನ್ಯಾಸಕ ಆರ್. ಬಿ. ಕಪಾಲಿ ಉಪಸ್ಥಿತರಿದ್ದರು.