ಇಂಡಿ: ನಗರದ ಅಭಿವೃದ್ಧಿಯ ಹಿತದೃಷ್ಟಿಯಿಂದ ಪುರಸಭೆ ಸದಸ್ಯರು ಕಾಂಗ್ರೆಸ್ ಪಕ್ಕೆ ಬೆಂಬಲಿಸಿದ್ದಾರೆ. ನಮ್ಮ ಪದ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸಿದ ಸರ್ವ ಸದಸ್ಯರಿಗೂ ಧನ್ಯವಾದಗಳು ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪದ ಗೆಲುವಿನ ಹಿನ್ನೆಲೆಯಲ್ಲಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸಾಮಾಜಿಕ ನ್ಯಾಯ ಹಾಗೂ ಸಮ&ಸಮಾಜ ನಿರ್ಮಾಣದ ಹಿನ್ನೆಲೆಯಲ್ಲಿ ಪುರಸಭೆ ಅಧ್ಯ, ಉಪಾಧ್ಯರ ಆಯ್ಕೆ ಮಾಡಲಾಗಿದೆ. ಈ ಗೆಲುವಿಗೆ ಪದ ಸಂಟನೆ ಮುಖ್ಯಕಾರಣವಾಗಿದೆ.
ಇನ್ನು ಮತೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲ ಸಮುದಾಯಗಳಿಗೆ ಸಾಮಾಜಿಕ ನ್ಯಾಯದ ಅಡಿಯಲ್ಲಿ ನಾಮನಿರ್ದೇಶನ ಸೇರಿ, ಚುನಾವಣೆಯಲ್ಲಿ ಹಾಗೂ ವಿವಿಧ ೇತ್ರದಲ್ಲಿ ಸಾಮಾಜಿಕ ನ್ಯಾಯ ಕಲ್ಪಿಸಲಾಗಿದೆ. ಪಟ್ಟಣವನ್ನು ವಿಶೇಷವಾಗಿ ಮಾಡಲ್ ಸಿಟಿ, ಲೆಮನ್ ಸಿಟಿ ಮಾಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು.
ಈಗಾಗಲೇ ನಗರದಲ್ಲಿ 24*7 ಕುಡಿಯುವ ನೀರಿನ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದ್ದು, ಇನ್ನೂ ನಗರದ ಒಳರಸ್ತೆಗಳಿಗೆ ಹಾಗೂ ಮತೇತ್ರದ ವ್ಯಾಪ್ತಿಯಲ್ಲಿ ಬರುವ ಎಲ್ಲ ರಸ್ತೆಗಳಿಗೆ ಆದ್ಯತೆ ನೀಡಿ ಅತೀಶ್ರೀದಲ್ಲೇ ದುರಸ್ತಿ ಕಾರ್ಯ ಮಾಡಲಾಗುವುದು. ಚುನಾವಣೆ ಬರಬಹುದು, ಹೋಗಬಹುದು. ಆದರೆ ವಿಶ್ವಾಸ, ಪ್ರೀತಿ, ಸೌಹಾರ್ದ, ಸಾಮರಸ್ಯದ ಬದುಕು ಅವಶ್ಯಕ. ಗಡಿಭಾಗದಲ್ಲಿ ಸಂಸ್ಕಾರ, ಸಂಸತಿ ಹಾಗೂ ಕನ್ನಡ ಭಾಷೆಯನ್ನು ಬೆಳೆಸಬೇಕು. ನಗರದಲ್ಲಿ ಗತವೈಭವದ ದಿನಗಳು ನಡೆಯಬೇಕು ಎಂದು ಹೇಳಿದರು.
ಪುರಸಭೆಗೆ ನೂತನವಾಗಿ ಆಯ್ಕೆಯಾದ ಅಧ್ಯ ಲಿಂಬಾಜಿ ರಾಠೋಡ, ಉಪಾಧ್ಯಜಹಾಂಗೀರ ಸೌದಾಗಾರ ಹಾಗೂ ಬ್ಲಾಕ್ ಅಧ್ಯ ಜಾವೀದ್ ಮೋಮಿನ್, ಭೀಮಣ್ಣ ಕವಲಗಿ, ಇಲಿಯಾಸ್ ಬೊರಾಮಣಿ ಹಾಗೂ ಪುರಸಭೆ ಸದಸ್ಯ ಭೀಮನಗೌಡ ಪಾಟೀಲ, ಅಯೂಬ್ ಬಾಗವಾನ, ಸಂಗೀತಾ ಕರಕಟ್ಟಿ, ಭಾಗೀರಥಿ ಕುಂಬಾರ, ಉಮೇಶ ದೇಗಿನಾಳ, ಸತೀಶ ಕುಂಬಾರ, ಭೀಮಾಶಂಕರ ಮೂರಮನ್ ಇತರರಿದ್ದರು.