ದೊಡ್ಡಬಳ್ಳಾಪುರದ ಕೊಟ್ಟಿಗೆ ಮಾಚೇನಹಳ್ಳಿಯಲ್ಲಿ ಆಯೋಜಿಸಿದ್ದ ಜಾನುವಾರು ತಪಾಸಣಾ ಶಿಬಿರದಲ್ಲಿ ಜಾನುವಾರಗಳ ಆರೋಗ್ಯ ತಪಾಸಣೆ ಮಾಡಲಾಯಿತು. 
ಜಿಲ್ಲೆ

ಜಾನುವಾರುಗಳ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಲಿ

ದೊಡ್ಡಬಳ್ಳಾಪುರ : ಜಾನುವಾರುಗಳ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಬೇಕು. ಅವುಗಳಿಗೆ ತಗಲುವ ರೋಗಗಳನ್ನು ನಿಯಂತ್ರಿಸುವುದರಿಂದ ಹಾಲಿನ ಉತ್ಪಾದನೆ ಹೆಚ್ಚಾಗುತ್ತದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ.ಹನುಮಂತರಾಯ ಹೇಳಿದರು. ಕೃಷಿ ವಿಜ್ಞಾನ ಕೇಂದ್ರ, ಕ್ರೆಡಿಟ್​ ಆಕ್ಸೆಸ್​ ಇಂಡಿಯಾ ಫೌಂಡೇಷನ್​, ಇಂಟಾಸ್​ ಅನಿಮಲ್​ ಹೆಲ್ತ್​ ಮತ್ತು ಕೊಟ್ಟಿಗೆ ಮಾಚೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂದ ಸಹಯೋಗದಲ್ಲಿ ೊಟ್ಟಿಗೆಮಾಚೇನಹಳ್ಳಿಯಲ್ಲಿ ಇತ್ತಿಚೇಗೆ ಆಯೋಜಿಸಿದ್ದ ಜಾನುವಾರು ತಪಾಸಣಾ ಶಿಬಿರದಲ್ಲಿ ಮಾತನಾಡಿದರು.

ಜಾನುವಾರುಗಳಿಗೆ ನಿಯಮಿತವಾಗಿ ಲಸಿಕೆಗಳನ್ನು ನೀಡುತ್ತಿರಬೇಕು. ಇದರಿಂದ ಅವುಗಳ ಆರೋಗ್ಯ ಉತ್ತಮವಾಗಿರುವ ಜತೆಗೆ ರೈತರಿಗೆ ಆರ್ಥಿಕವಾಗಿ ಲಾಭದಾಯಕವಾಗಿ ಹೈನೋದ್ಯಮ ಮೂಡಿಬರುತ್ತದೆ ಎಂದರು. ಹೆಬ್ಬಾಳದ ಪಶುವೈದ್ಯಕಿಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಜಿ.ಜೆ.ರೇಣುಕ ಆರಾಧ್ಯ ಮಾತನಾಡಿ, ರಾಸುಗಳಲ್ಲಿ ಪೌಷ್ಟಿಕಾಂಶದ ಕೊರತೆಯಿಂದ ಬಂಜೆತನ ಸಮಸ್ಯೆಯು ಅಧಿಕವಾಗುತ್ತಿದೆ. ಆದ್ದರಿಂದ ಉತಷ್ಠ ಮೇವಿನ ಬೆಳೆಗಳಾದ ಸಿ&ಓ5, ಕುದುರೆ ಮಸಾಲೆ, ಹುರುಳಿ, ಅಲಸಂದೆ ಮುಂತಾದ ಹಸಿ ಮೇವುಗಳನ್ನು 20 ಕೆ.ಜಿ. ಹಾಗೂ 5 ಕೆ.ಜಿ.ಒಣಹುಲ್ಲು ಅನುಪಾತದಲ್ಲಿ ಪ್ರತಿದಿನ ನೀಡಬೇಕು. ಇದರೊಂದಿಗೆ ಲವಣ ಮಿಶ್ರಣ ನೀಡಬೇಕು. ಕರುಗಳಲ್ಲಿ ಜಂತು ನಾಶಕ ಔಷಧಗಳ ಮಹತ್ವ ತಿಳಿಸಿದರು.

ಬೆಂಗಳೂರಿನ ಕ್ರೆಡಿಟ್​ ಆಕ್ಸೆಸ್​ ಇಂಡಿಯಾ ಫೌಂಡೇಷನ್​ ಮತ್ತು ಇಂಟಾಸ್​ ಅನಿಮಲ್​ ಹೆಲ್ತ್​ ಕಂಪನಿಯಿಂದ ಕ್ಯಾಲ್ಸಿಯಂ ಪೂರಕಗಳು, ಮಲ್ಟಿವಿಟಮಿನ್​ಗಳನ್ನು ಜಾನುವಾರುಗಳಿಗೆ ಉಚಿತವಾಗಿ ನೀಡಲಾಯಿತು. ಗ್ರಾಪಂ ಸದಸ್ಯ ಆನಂದ್​, ಹಾಲು ಉತ್ಪಾದಕರ ಸಹಕಾರ ಸಂದ ಕಾರ್ಯದರ್ಶಿ ಲ್ಮಪತಿ, ಹಾಲು ಪರೀಕ್ಷಕ ಚೇತನ್​, ಗ್ರಾಮದ ಹಿರಿಯ ಮುಖಂಡರಾದ ನಾಗರಾಜು, ಕೃಷ್ಣಪ್ಪ, ಬೈಲಪ್ಪ ಇತರರು ಇದ್ದರು.

ತಪಾಸಣೆ, ಚಿಕಿತ್ಸೆ : ಶಿಬಿರದಲ್ಲಿ 60ಕ್ಕೂ ಅಧಿಕ ರಾಸುಗಳಿಗೆ ಜ್ವರ, ಕೆಮ್ಮು, ಹರ್ನಿಯಾ, ರಕ್ತಪಿಂಜರಿ, ಹೊಟ್ಟೆ ಉಬ್ಬರ, ಥೈಲೇರಿಯಾ, ವಿಷಭಾದೆ, ಅಜೀರ್ಣ, ಪುನರಾವರ್ತಿತ ಸಂತಾನೋತ್ಪತ್ತಿ, ಚರ್ಮದ ಸೋಂಕು, ಗಾಯ, ಕೆಚ್ಚಲು ಬಾವು, ಜಂತು ಹುಳು ಬಾಧೆ ಮತ್ತು ಉಣ್ಣೆ ಹುಳುವಿನ ಬಾಧೆ ಇತ್ಯಾದಿ ಸಮಸ್ಯೆಗಳ ಕುರಿತು ತಪಾಸಣೆ ನಡೆಸಿ ಚಿಕಿತ್ಸೆ ನೀಡಲಾಯಿತು. ಕರ್ನಾಟಕ ಹಾಲು ಒಕ್ಕೂಟದ ಪಶು ವೈದ್ಯ ಡಾ.ಜನ್ನಪ್ಪ ಸಾಕಣೆಗೆ ವಿವಿಧ ಕಾಯಿಲೆಗಳಿಗೆ ನಾಟಿ ಔಷಧ ಬಳಕೆ, ಗರ್ಭಾವಸ್ಥೆ ರಾಸುಗಳ ಆರೈಕೆ, ಪಶು ಆಹಾರ, ವಿವಿಧ ಲಸಿಕೆಗಳ ಬಗ್ಗೆ ತಿಳಿವಳಿಕೆ ನೀಡಿದರು. ಪಶುವೈದ್ಯಕಿಯ ಮಹಾವಿದ್ಯಾಲಯದ ಸ್ನಾತಕೋತ್ತರ ವಿದ್ಯಾರ್ಥಿಗಳಾದ ಡಾ.ಕೆ.ಆರ್​.ವೈಷ್ಣವಿ, ಡಾ.ಚೇತನ್​ ರಾಸುಗಳಿಗೆ ಚಿಕಿತ್ಸೆ ನೀಡಿ ಔಷಧೋಪಚಾರ ಮಾಡಿದರು.