ತಾಂಬಾ ಸಮೀಪದ ಶಿವಪುರ ಗ್ರಾಮದ ಜಂಗ್ಲಿಪಿರ ದೇವರ ಜಾತ್ರೆ ಮಹೋತ್ಸವದಲ್ಲಿ ಶಾಸಕ ಅಶೋಕ ಮನಗೂಳಿ ಅವರಿಗೆ ಬೆಳ್ಳಿ ಕಿರೀಟ ತೊಡಿಸಿ ಸನ್ಮಾನಿಸಲಾಯಿತು. ಚೆನ್ನಮಲ್ಲಪ್ಪಗೌಡ ಪಾಟೀಲ, ಶರಣಗೌಡ ಪಾಟೀಲ, ದುಂಡಪ್ಪ ಪೂಜಾರಿ ಇತರರಿದ್ದರು. 
ಜಿಲ್ಲೆ

ಜನರ ಸಮಸ್ಯೆ ನಿವಾರಣೆಗೆ ಆದ್ಯತೆ

ಗಿರೀಶ ಸಗರ

ತಾಂಬಾ: ಮನುಷ್ಯ ಅಂದುಕೊಂಡಿದ್ದನ್ನು ಸಾಧಿಸಲು ನಿರಂತರ ಪ್ರಯತ್ನ ಅವಶ್ಯ. ಅದಕ್ಕಾಗಿ ಶಿವಪುರ ಗ್ರಾಮದ ಮಹಾಜನತೆ ತಮ್ಮ ಮಕ್ಕಳಿಗೆ ಶಿಣ ಕೊಡಿಸಲು ಕಾಳಜಿ ವಹಿಸಬೇಕು. ನನ್ನ ರಾಜಕಾರಣದಲ್ಲಿ ಶಿವಪುರ ಗ್ರಾಮಸ್ಥರು ನನ್ನ ಕೈಹಿಡಿದು ಎತ್ತಿದ್ದಾರೆ. ಮುಂದೆ ಕೊಡ ನಿಮ್ಮ ಆಶೀರ್ವಾದ ನನ್ನ ಮೇಲೆ ಇರಲಿ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಸಮೀಪದ ಶಿವಪುರ ಗ್ರಾಮದ ಜಂಗ್ಲಿಪಿರ ದೇವರ ಜಾತ್ರೆ ಮಹೋತ್ಸವದಲ್ಲಿ ವಿಶೇಷ ಸನ್ಮಾನ ಸ್ವೀಕರಿಸಿ ಶನಿವಾರ ಅವರು ಮಾತನಾಡಿದರು.

ಕ್ಷೇತ್ರದ ಅಭಿವೃದ್ಧಿಗಾಗಿ ಬಡವರು, ಕೂಲಿ ಕಾರ್ಮಿಕರು, ದೀನ ದಲಿತರು, ಅಲ್ಪ ಸಂಖ್ಯಾತರು ಸೇರಿ ಎಲ್ಲರಿಗೂ ಅನುಕೂಲವಾಗುವ ದೃಷ್ಟಿಯಿಂದ ಸರ್ಕಾರದ ಹಲವಾರು ಯೋಜನೆಗಳು ನಿಮ್ಮ ಮನೆ ಬಾಗಿಲಿಗೆ ಮುಟ್ಟುವಂತಾಗಬೇಕು. ಅಧಿಕಾರ ಶಾಶ್ವತವಲ್ಲ. ಜನರ ಪ್ರೀತಿ, ವಿಶ್ವಾಸ ಶಾಶ್ವತವಾಗಿದೆ.

ಸಿಂದಗಿ ಮತೇತ್ರವನ್ನು ಮಾದರಿ ಮಾಡುವ ಸಂಕಲ್ಪ ಹೊಂದಿರುವೆ. ಕ್ಷೇತ್ರದ ಪ್ರತಿಯೊಂದು ಗ್ರಾಮಕ್ಕೆ ಖುದ್ದು ಭೇಟಿ ನೀಡಿ ಸಮಸ್ಯೆಗಳಿಗೆ ಸ್ಪಂದಿಸುವೆ. ಮೂಲಸೌಕರ್ಯ, ಶುದ್ಧ ಕುಡಿಯುವ ನೀರಿನ ಸಮಸ್ಯೆ, ರಸ್ತೆಗಳು, ರೈತರ ಸಮಸ್ಯೆ, ಬಡವರಿಗೆ ಸರ್ಕಾರದ ಎಲ್ಲ ಮೂಲಸೌಲಭ್ಯಗಳು ಸಿಗುವಂತೆ ಪ್ರಾಮಾಣಿಕವಾಗಿ ಶ್ರಮಿಸುವೆ ಎಂದು ಹೇಳಿದರು.

ಚೆನ್ನಮಲ್ಲಪ್ಪಗೌಡ ಪಾಟೀಲ, ಶರಣಗೌಡ ಪಾಟೀಲ, ದುಂಡಪ್ಪ ಪೂಜಾರಿ, ಮಲ್ಲೇಶಿ ಪೂಜಾರಿ, ಅಪ್ಪಣ್ಣ ಹಿರೇಕುರಬರ, ಶಿವಲಿಂಗಪ್ಪಗೌಡ ಪಾಟೀಲ, ಮಾದೇವ ಪೂಜಾರಿ, ಬಾಬು ಪೂಜಾರಿ, ರಾಜಕುಮಾರ ತಂಗಾ, ಸಿದಗೊಂಡ ಪೂಜಾರಿ, ಗೋಪಾಲ ದಂದರಗಿ, ಅಪ್ಪಣ್ಣ ಕಲ್ಲೂರ, ರಾಚಪ್ಪ ಗಳೇದ, ನಾಗಪ್ಪ ಕುರುಬತ್ತಳ್ಳಿ, ಪರಸು ಬಿಸನಾಳ, ಸಿದ್ದು ಹತ್ತಳ್ಳಿ, ಕೆ.ಎನ್​.ಪಾಟೀಲ, ರಾಜುಗೌಡ ಪಾಟೀಲ ಇತರರಿದ್ದರು.