ಜಿಲ್ಲೆ

ಅಭಿವೃದ್ಧಿಯಲ್ಲಿ ಮಹಿಳಾ ಶಕ್ತಿಗೆ ಆದ್ಯತೆ

ಇಂದಿರಾ ಎನ್ ಕೆ

ಬೈಂದೂರು: ದೇಶ ಅಭಿವೃದ್ಧಿ ಪಥದಲ್ಲಿ ಹೆಜ್ಜೆ ಇಡಬೇಕಾದರೆ ಮಹಿಳಾ ಶಕ್ತಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಹೇಳಿದರು.

ನಾಗೂರು ಶಾಂತೇರಿ ಕಾಮಾಕ್ಷಿ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಜೆಸಿಐ ಉಪ್ಪುಂದ ಸುಪ್ರಿಂ ಘಟಕ ಪದಪ್ರದಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ನಿರ್ಗಮಿತ ಅಧ್ಯಕ್ಷೆ ಸುಮಾ ಆಚಾರ್ 2025ನೇ ಸಾಲಿನ ಅಧ್ಯಕ್ಷೆ ಜ್ಯೋತಿ ಜಯರಾಮ ಶೆಟ್ಟಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪುರಸ್ಕೃತ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

ವಲಯಾಧ್ಯಕ್ಷ ಜೇಸಿಐ ಸೆನೆಟರ್ ಅಭಿಲಾಷ್ ಬಿ.ಎ., ವಲಯ ಜೆಸಿಐ ಪ್ರಾಂತ್ಯ ಉಪಾಧ್ಯಕ್ಷ ಸಿಎ ಅನ್ವೇಶ್ ಶೆಟ್ಟಿ, ನಿಟಕಪೂರ್ವ ವಲಯ ಉಪಾಧ್ಯಕ್ಷ ಮಂಜುನಾಥ ದೇವಾಡಿಗ, ನಿವೃತ್ತ ಮುಖ್ಯ ಶಿಕ್ಷಕ ಸದಾಶಿವ ಶ್ಯಾನುಭೋಗ್, ಜೆಸಿಐ ನಿರ್ಗಮನ ಕಾರ್ಯದರ್ಶಿ ರವಿರಾಜ್ ಪೂಜಾರಿ, ಲೇಡಿ ಜೆಸಿ ಅಧ್ಯಕ್ಷೆ ವೀಣಾ ಆಚಾರ್ ಉಪಸ್ಥಿತರಿದ್ದರು. ಜೆಜೆಸಿ ಅಧ್ಯಕ್ಷೆ ಪಂಚಮಿ ಆಚಾರ್ ಜೇಸಿವಾಣಿ ವಾಚಿಸಿದರು, ನೂತನ ಕಾರ್ಯದರ್ಶಿ ರಾಘವೇಂದ್ರ ಕೊಡೇರಿ ವಂದಸಿದರು.