ಮುದಗಲ್‌ನಲ್ಲಿ ಪೈಗಂಬರ್ ನಗರ-ಜಕ್ಕೇರುಮಡು ರಸ್ತೆ ಕಾಮಗಾರಿಗೆ ಸಂಸದ ಜಿ.ಕುಮಾರನಾಯಕ ಚಾಲನೆ ನೀಡಿದರು. ಮಾಜಿ ಶಾಸಕ ಡಿ.ಎಸ್.ಹೂಲಗೇರಿ, ಮುದಗಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಶಂಕರ್ ಗೌಡ, ತಮ್ಮಣ್ಣ ಗುತ್ತೇದಾರ್, ಅಜ್ಮೀರ್ ಬೆಳ್ಳಿಕಟ್, ಬಸವರಾಜ ಲೆಕ್ಕಿಹಾಳ, ಮಲ್ಲರೆಡ್ಡೆಪ್ಪ , ಬಸವಂತಪ್ಪ ಮಟ್ಟೂರು ಇದ್ದರು. 
ಜಿಲ್ಲೆ

ಗ್ರಾಮೀಣ ರಸ್ತೆಗಳ ಸುಧಾರಣೆಗೆ ಆದ್ಯತೆ

ನರೇಶ್ ಕುಮಾರ್

ಮುದಗಲ್: ಕಲ್ಯಾಣ ಪಥ ಯೋಜನೆ ಅನುಷ್ಠಾನಗೊಳಿಸುವ ಮೂಲಕ ಲಿಂಗಸುಗೂರು ತಾಲೂಕಾದ್ಯಂತ ಗ್ರಾಮೀಣ ರಸ್ತೆಗಳ ಸಧಾರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದ ಜಿ.ಕುಮಾರ ನಾಯಕ ಹೇಳಿದರು.

ಇಲ್ಲಿನ ಪೈಗಂಬರ್ ನಗರದಿಂದ ಜಕ್ಕೇರುಮಡು ಗ್ರಾಮದವರೆಗೆ ಕೆಕೆಆರ್‌ಡಿಬಿ ಮ್ಯಾಕ್ರೋ ಯೋಜನೆಯಡಿ 74.32 ಲಕ್ಷ ರೂ.ವೆಚ್ಚದ ಬಿ.ಟಿ. ರಸ್ತೆ ಕಾಮಗಾರಿಗೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಲಿಂಗಸುಗೂರು ತಾಲೂಕಿನ ಗ್ರಾಮೀಣ ಭಾಗದಲ್ಲಿ ರಸ್ತೆ, ಕುಡಿವ ನೀರು, ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕೆಕೆಆರ್‌ಡಿಬಿಯಿಂದ ಹೆಚ್ಚಿನ ಅನುದಾನ ತಂದು ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.

ಮಸ್ಕಿ ಶಾಸಕ ಆರ್.ಬಸನಗೌಡ ತುರ್ವಿಹಾಳ ಮಾತನಾಡಿ, ಸಂಸದರೊಂದಿಗೆ ನಾವು ಕೂಡ ಕೈಜೋಡಿಸಿ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

ರಾಹುಲ್ ಗಾಂಧಿ ಯುವಾ ಬ್ರಿಗೇಡ್‌ನ ರಾಜ್ಯ ಕಾರ್ಯದರ್ಶಿ ಎಸ್.ಆರ್.ರಸೂಲ್, ಮಾಜಿ ಶಾಸಕ ಡಿ.ಎಸ್.ಹೂಲಗೇರಿ, ಮುಖಂಡರಾದ ಅಜೀಂ ಸಾಬ್, ನ್ಯಾಮತ್ ಖಾದ್ರಿ, ದಾವೂದ್ ಸಾಬ್, ಅಮೀರಬೇಗ್ ಉಸ್ತಾದ್, ಬುಡ್ನೇಸಾಬ್, ತಸ್ಲೀಂ ಮುಲ್ಲಾ, ಅಮೀರ್ ಹುಸೇನ್ ಕೋರಿ, ಬಸವರಾಜ ಜೆಲ್ಲಿ, ರಘುವೀರ ಮುದಗಲ್, ಮಹ್ಮದ್ ಅಲಿ, ಸಂಗಮೇಶ ಸರಗಣಾಚಾರಿ, ಖದೀರ್ ಪಾನವಾಲೆ, ಗಫೂರ್ ಖಾನ್, ಸೈಯದ್ ಸಾಬ್ ಇದ್ದರು.