ಕೆ.ಎಂ.ದೊಡ್ಡಿ ಸಮೀಪದ ಎಚ್.ಹೊಸುರು ಗ್ರಾಮದ ಶ್ರೀ ಕಾಳಮ್ಮ ದೇವಾಲಯದ ಕಾಂಪೌಂಡ್ ನಿರ್ಮಾಣ ಕಾಮಗಾರಿಗೆ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಭೂಮಿ ಪೂಜೆ ನೆರವೇರಿಸಿದರು. ಬಸವರಾಜೇಗೌಡ, ಬಿ.ಗಿರೀಶ್, ಭರತೇಶ್, ಎಚ್.ಹೊಸುರು ಮಹೇಶ್ ಇತರರು ಇದ್ದರು.  
ಜಿಲ್ಲೆ

ಗುಣಮಟ್ಟದ ಕಾಮಗಾರಿಗೆ ಆದ್ಯತೆ

ರವಿಕುಮಾರ್ ಪಿ. ಕೆ

ಕೆ.ಎಂ.ದೊಡ್ಡಿ: ನಮ್ಮ ಅನುದಾನದಲ್ಲಿ ನಡೆದ ಕಾಮಗಾರಿಯಲ್ಲಿ ಯಾವುದೇ ಗುತ್ತಿಗೆದಾರನಿಂದ ಬಿಡಿಗಾಸು ಕೇಳುವುದಿಲ್ಲ. ನನಗೆ ಅದರ ಅವಶ್ಯಕತೆಯೂ ಇಲ್ಲ. ಗುಣಮಟ್ಟದ ಕಾಮಗಾರಿಯಷ್ಟೇ ಮುಖ್ಯ ಎಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ತಿಳಿಸಿದರು.

ಸಮೀಪದ ಎಚ್.ಹೊಸುರು ಗ್ರಾಮದ ಶ್ರೀ ಕಾಳಮ್ಮ ದೇವಾಲಯದ ಕಾಂಪೌಂಡ್ ನಿರ್ಮಾಣ ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ನಾನು ಯಾವುದೇ ಕೆಲಸಕ್ಕೂ ಲಂಚ ಪಡೆಯವುದಿಲ್ಲ. ಅದರ ಅವಶ್ಯಕತೆಯು ನನಗಿಲ್ಲ ಎಂದರು.

ರಾಜಕೀಯ ವಿಚಾರಗಳನ್ನು ಚುನಾವಣಾ ಸಂದರ್ಭ ಬಳಸಿಕೊಳ್ಳಿ. ರಾಜಕೀಯದಲ್ಲಿ ಸ್ಥಾನ-ಮಾನ ಗಳಿಸಲು ಹಣೆಬರಹ ಬೇಕಷ್ಟೆ. ಹಣೆಬರಹ ಇದ್ದರೆ ಅಧಿಕಾರ ಸಿಗುತ್ತದೆ. ನಾನು ನನ್ನ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ಗ್ರಾಮದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಪ್ರಸಕ್ತ ವರ್ಷ 5 ಲಕ್ಷ ರೂ. ಅನುದಾನ ನೀಡಿದ್ದು, ಇನ್ನು 10 ರಿಂದ 15 ಲಕ್ಷ ರೂ. ಅನುದಾನ ನೀಡುವುದಾಗಿ ಭರವಸೆ ನೀಡಿದರು.

ಪ್ರಸ್ತುತ ದಿನಗಳಲ್ಲಿ ಸಾಮಾನ್ಯ ಜನ ರಾಜಕೀಯ ಪಕ್ಷಗಳನ್ನು ಗಮನಿಸುವುದು ಕಡಿಮೆ. ಯಾವ ಜನಪ್ರತಿನಿಧಿ ತಮ್ಮ ಅಧಿಕಾರವಧಿಯಲ್ಲಿ ಏನನ್ನು ಅಭಿವೃದ್ಧಿ ಮಾಡಿದ್ದಾರೆ. ಆತ ಶುದ್ಧ ಹಸ್ತನೇ ಎಂಬುವುದನ್ನು ಗಮನಿಸುತ್ತಾರೆ. ನಾವು ಮಾಡುವ ಕೆಲಸ ಗ್ರಾಮಗಳಲ್ಲಿ ಸಾಕ್ಷಿಗುಡ್ಡೆಯಾಗಿ ರೂಪು ಕೊಳ್ಳಬೇಕು. ಈ ನಿಟ್ಟಿನಲ್ಲಿ ಗ್ರಾಮಸ್ಥರೊಂದಿಗೆ ಗ್ರಾಮದ ಅಭಿವೃದ್ಧಿಗೆ ಕೈಜೋಡಿಸುತ್ತೆನೆ ಎಂದರು.

ಈ ವೇಳೆ ಗ್ರಾಮದ ಶ್ರೀ ಕಾಳಮ್ಮ ದೇವಾಲಯ ಅಭಿವೃದ್ಧಿಗೆ ನಿವೇಶನ ನೀಡಿದ ದೇವಮ್ಮ ಮರಿಸ್ವಾಮಿ ದಂಪತಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಮಧು ಜಿ.ಮಾದೇಗೌಡ, ದಂಪತಿಯನ್ನು ಅಭಿನಂದಿಸಿದರು.

ಕಾವೇರಿ ನೀರಾವರಿ ನಿಗಮದ ನಿವೃತ್ತ ಇಇ ಹಾಗಲಹಳ್ಳಿ ಬಸವರಾಜೇಗೌಡ, ತಾ.ಪಂ. ಮಾಜಿ ಸದಸ್ಯರಾದ ಬಿ.ಗಿರೀಶ್, ಭರತೇಶ್, ಗ್ರಾ.ಪಂ. ಮಾಜಿ ಅಧ್ಯಕ್ಷ ಎಚ್.ಹೊಸುರು ಮಹೇಶ್, ಮುಖಂಡರಾದ ಆರ್.ಸಿದ್ದಪ್ಪ, ಸ್ವರೂಪ್ ಚಂದ್ರ, ಹಾಗಲಹಳ್ಳಿ ಪುಟ್ಟಸ್ವಾಮಿ, ಅನಿಲ್‌ಕುಮಾರ್, ಗ್ರಾಮದ ಯಜಮಾನರಾದ ನಾಡಗೌಡ ಬಸವರಾಜು, ಶಿವರಾಮು, ಸಿದ್ದಸ್ವಾಮಿ, ಶ್ರೀನಿವಾಸ್, ಈರೇಗೌಡ, ಕರೀಗೌಡ, ರಮೇಶ್, ರಾಜೇಂದ್ರ, ಸಿದ್ದರಾಜು ಇದ್ದರು.