ತಾಂಬಾ: ಹಳ್ಳಿಗಳು ಈ ದೇಶದ ದೊಡ್ಡ ಸಂಪತ್ತು. ಹಳ್ಳಿಯಲ್ಲಿರುವ ರೈತರು ಸುಧಾರಣೆಯಾದರೆ ಮಾತ್ರ ರಾಜ್ಯ ಮತ್ತು ದೇಶ ಅಭಿವೃದ್ಧಿಯಾಗುತ್ತವೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಸಮೀಪದ ಸುರಗಿಹಳ್ಳಿ ಗ್ರಾಮದ ರೈತ ಮಳಸಿದಪ್ಪ ತಾರಾಪುರ ಅವರಿಗೆ ಕೃಷಿ ಇಲಾಖೆಯಿಂದ ೨೦೨೫-೨೬ನೇ ಸಾಲಿನಲ್ಲಿ ಮಂಜೂರಾದ ೫೦ ಲಕ್ಷ ರೂ. ಸಹಾಯ ಧನದ ಕಬ್ಬು ಕಟಾವು ಯಂತ್ರದ ಗೋದಾಮಿನ ವಾಸ್ತು ಶಾಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿ, ಪ್ರತಿ ಹಳ್ಳಿಗಳಲ್ಲಿ ಮೂಲ ಸೌಕರ್ಯ ಕಲ್ಪಿಸಿ ಹಳ್ಳಿಯ ರೈತರ ಅಭಿವೃದ್ಧಿ ಕಾಣುವುದೇ ಮೂಲ ಮಂತ್ರವಾಗಿದೆ. ಯಾರಲ್ಲಿ ರೈತರ ಬಗ್ಗೆ ಭಕ್ತಿ ಇರುತ್ತದೋ ಅವರಿಗೆ ಬಡವರ, ದೀನ ದಲಿತರ ಬಗ್ಗೆ ಕಾಳಜಿ ಇರುತ್ತದೆ ಎಂದರು.
ರೈತ ಮಳಸಿದಪ್ಪ ತಾರಾಪುರ ಮಾತನಾಡಿ, ಶಾಸಕ ಅಶೋಕ ಮನಗೂಳಿಯವರು ಇಲ್ಲಿನ ನೀರಾವರಿ ಕ್ಷೇತ್ರಕ್ಕೆ ಆದ್ಯತೆ ನೀಡಿರುವುದರಿಂದಲೇ ಸದ್ಯ ಈ ಭಾಗದಲ್ಲಿ ಸಂಪೂರ್ಣ ಹಸಿರುಮಯವಾಗಿದೆ ಎಂದು ಹೇಳಿದರು.
ಅಭಿನವ ರಾಚೋಟೇಶ್ವರ ಶ್ರೀಗಳು, ಜಿಲ್ಲಾ ಕೆಡಿಪಿ ಸದಸ್ಯ ನೂರಹಮ್‌ದ ಅತ್ತಾರ, ಆಲಮೇಲ ತಾಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಅಶೋಕ ಕೋಳಾರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಪೂಜಾರಿ ಮಾತನಾಡಿದರು.
ಆಲಮೇಲ ತಾಲೂಕು ನೌಕರರ ಸಂಘದ ಅಧ್ಯಕ್ಷ ರವಿ ಬಿರಾದಾರ, ಶ್ರೀಶೈಲ ಮದಭಾವಿ, ಪ್ರಕಾಶ ಪಾಟೀಲ, ಪ್ರಕಾಶ ಅಡವಿ, ಚಂದ್ರಶೇಖರ ರೂಗಿ, ಮಳಸಿದಪ್ಪ ತಾರಾಪುರ, ಶರಣಬಸಪ್ಪ ಭೂಗೊಂಡಿ, ಜಟ್ಟೆಪ್ಪ ಹತ್ತಿ, ಬಸವರಾಜ ಇಂಡಿ, ಶಿವರಾಯಗೌಡ ಪಾಟೀಲ, ಅನಿಲ ಇವಣಗಿ, ಚನ್ನಬಸು ತಾರಾಪುರ, ಸಿದ್ದಣ್ಣ ತೊರವಿ ಇತರರಿದ್ದರು.