ತೇರದಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ರಾಂತ ಕೊಠಡಿ ನಿರ್ಮಾಣಕ್ಕೆ ಶಾಸಕ ಸಿದ್ದು ಸವದಿ ಭೂಮಿಪೂಜೆ ನೆರವೇರಿಸಿದರು. ಮುಖಂಡ ಮಹಾವೀರ ಕೊಕಟನೂರ, ರಾಮಣ್ಣ ಹಿಡಕಲ್ ಇದ್ದರು. 
ಜಿಲ್ಲೆ

ತೇರದಾಳ ಮತಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ - ಶಾಸಕ ಸಿದ್ದು ಸವದಿ ಹೇಳಿಕೆ

Bagalkot

ತೇರದಾಳ: ಕ್ಷೇತ್ರದ ಸರ್ವತೋಮುಖ ಏಳಿಗೆಗಾಗಿ ಕೋಟ್ಯಂತರ ರೂ. ಅನುದಾನ ಹಾಗೂ ಹಲವು ಶಾಶ್ವತ ಯೋಜನೆಗಳನ್ನು ಸರ್ಕಾರ ಒದಗಿಸಿದೆ ಎಂದು ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಸಿದ್ದು ಸವದಿ ಹೇಳಿದರು.

ಲೋಕೋಪಯೋಗಿ ಇಲಾಖೆಯಡಿ ಅಂದಾಜು 40 ಲಕ್ಷ ರೂ. ಅನುದಾನದಲ್ಲಿ ಪೊಲೀಸ್ ಠಾಣೆ ಹತ್ತಿರದ ಸೇವಾಲಾಲ ಕಾಲನಿ ರಸ್ತೆ, ದೇಸಾರ ಬಾವಿ ಹತ್ತಿರ ಚರಂಡಿ ನಿರ್ಮಾಣ ಹಾಗೂ ಗುರುಕುಲ ರಸ್ತೆಯ ಸಂಜು ದುಪದಾಳ ಮನೆಯಿಂದ ಸಿಸಿ ರಸ್ತೆ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ರಾಂತಿ ಕೊಠಡಿ ಹಾಗೂ ಶೌಚಗೃಹ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವುದರ ಜತೆಗೆ ಗುಣಮಟ್ಟದಿಂದ ಕೂಡಿರುವಂತೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಆ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು. ಬಿಜೆಪಿ ನಗರ ಘಟಕ ಅಧ್ಯಕ್ಷ ಮಹಾವೀರ ಕೊಕಟನೂರ, ರಾಮಣ್ಣ ಹಿಡಕಲ್, ಸಚಿನ್ ಕೊಡತೆ, ಕಾಶಿನಾಥ ರಾಠೋಡ, ಶಂಕರ ಕುಂಬಾರ, ಸದಾಶಿವ ಹೊಸಮನಿ, ಪ್ರಭು ಗಸ್ತಿ, ಪ್ರಕಾಶ ಹೊಸಮನಿ, ಮುರುಗೇಶ ಮಿರ್ಜಿ, ಸುರೇಶ ಪರೀಟ, ಸಂತೋಷ ಜಮಖಂಡಿ ಇತರರಿದ್ದರು.