ಧಾರವಾಡ: ನಾನು ಮುಖ್ಯಮಂತ್ರಿಯಾಗಿದ್ದಾಗ ಕೈಗಾರಿಕಾ ವಲಯದ ಅಭಿವೃದ್ಧಿಗೆ ಒತ್ತು ನೀಡಿದ್ದೆ. ಆದರೆ, ಕಡಿಮೆ ಅವಽಗೆ ಮುಖ್ಯಮಂತ್ರಿಯÁಗಿದ್ದರಿAದ ಅನುಷ್ಠಾನ ಸಾಧ್ಯವಾಗಲಿಲ್ಲ. ಇದೀಗ ಮತ್ತೆ ಕೇಂದ್ರದಲ್ಲಿ ಕೈಗಾರಿಕೆ ಸಚಿವನಾಗಿದ್ದೇನೆ. ದೇಶದ ಕೈಗಾರಿಕೆಗಳ ಆದ್ಯತೆಗೆ ಒತ್ತು ನೀಡಲಾಗುವುದು ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶೇಷವಾಗಿ ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಭಾಗದ ಕೈಗಾರಿಕಾ ಪ್ರಸ್ತಾವಗಳು ಬಂದರೆ ಒತ್ತು ನೀಡುತ್ತೇನೆ ಎಂದರು.
- ಕಳಸಾ- ಬಂಡೂರಿ ಬಗ್ಗೆ ಸೂಕ್ತ ನಿರ್ಧಾರ: ನಾನು ಸಿಎಂ ಆಗಿದ್ದಾಗ ಕಳಸಾ- ಬಂಡೂರಿ ಯೋಜನೆ ಜಾರಿಗೆ ಬಜೆಟ್‌ನಲ್ಲಿ ಅನುದಾನ ಘೋಷಿಸಲಾಗಿತ್ತು. 2006ರಿಂದ ಈವರೆಗೆ ಹಲವು ಸರ್ಕಾರಗಳು ಬಂದಿವೆ. ನ್ಯಾಯಾಽಕರಣ ನೀರು ಹಂಚಿಕೆ ಮಾಡಿದೆ. ಗೆಜೆಟ್ ನೊಟಿಫಿಕೇಷನ್ ಕೂಡ ಆಗಿದ್ದರೂ ಗೋವಾದ ತಕರಾರಿದೆ. ಕಾನೂನಿನ ಅಡಿ ನಮ್ಮ ಪಾಲಿನ ನೀರು ಪಡೆಯಬೇಕು. ಕೇಂದ್ರ ಮಂತ್ರಿಯಾಗಿ ಕೆಲವೇ ದಿನಗಳಾಗಿದ್ದು, ಶೀಘ್ರದಲ್ಲೇ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
- ಹಳೇ ಪ್ರಕರಣ ಮಾಯ: ವಾಲ್ಮೀಕಿ ನಿಗಮದ ಭ್ರಷ್ಟಾಚಾರದಲ್ಲಿ ಮತ್ತೊಬ್ಬ ಸಚಿವ ಭಾಗಿಯಾಗಿದ್ದು, ಹೊಸ ಪ್ರಕರಣಗಳು ಬೆಳಕಿಗೆ ಬಂದಾಗ ಹಳೇ ಪ್ರಕರಣ ಬಿಟ್ಟು ಬಿಡುತ್ತೇವೆ. ವಾಲ್ಮೀಕಿ ಪ್ರಕರಣವನ್ನು ಮರೆತು ಬಿಟ್ಟಿದ್ದೇವೆ. ಮಂತ್ರಿಯೊಬ್ಬರು ರಾಜೀನಾಮೆ ನೀಡಿದ್ದು, ಎಸ್‌ಐಟಿ ತನಿಖೆಯಲ್ಲಿ ಏನಾಗುತ್ತದೆ ನೋಡೋಣ ಎಂದರು.
- ಕೈಗಾರಿಕಾಭಿವೃದ್ಧಿಗೆ ವೇಗ: ಬೆಂಗಳೂರು ಮುಂಬೈ ಕೈಗಾರಿಕಾ ಕಾರಿಡಾರ್ ಯೋಜನೆಗೆ ವೇಗ ನೀಡಿ ರಾಜ್ಯದಲ್ಲಿ ಹೆಚ್ಚಿನ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ಕೈಗಾರಿಕಾಭಿವೃದ್ಧಿಗೆ ಒತ್ತು ನೀಡಲಾಗುವುದು. ಈ ಬಗ್ಗೆ ಕೇಂದ್ರ ಮಂತ್ರಿ ಮಂಡಳದೊ0ದಿಗೆ ಚರ್ಚಿಸಲಾಗುವುದು. ಪುಣೆ- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕ ಕೈಗಾರಿಕೆಗಳು ಸ್ಥಾಪನೆಯಾಗುತ್ತಿಲ್ಲ. ಕೇಂದ್ರ ಸರ್ಕಾರದ ಆತ್ಮನಿರ್ಭರ ಕಾರ್ಯಕ್ರಮವಿದ್ದು, ಸಬ್ಸಿಡಿ, ಇತರ ಪಾಲಿಸಿ ಮಾಡುತ್ತಿದ್ದಾರೆ. ಅದರ ಮೂಲಕ ರಾಜ್ಯಕ್ಕೆ ಅನುಕೂಲ ಮಾಡಲಾಗುವುದು ಎಂದರು.