ಇಳಕಲ್ಲ:ನಗರದ ದುರ್ಗಾ ಕಾಲನಿಯಲ್ಲಿ ಬನ್ನಿಮಹಾಂಕಾಳಿ ಸಮಿತಿ ವತಿಯಿಂದ ನಿರ್ಮಿಸಿದ ನೂತನ ನಾಗದೇವತಾ ಮೂರ್ತಿ ಪ್ರತಿಷ್ಠಾಪನೆ ಹಾಗೂ ಉದ್ಘಾಟನೆ ಸಮಾರಂಭ ಮಂಗಳವಾರ ನಡೆಯಿತು.
ಶಾಸಕ ವಿಜಯಾನಂದ ಕಾಶಪ್ಪನವರ ದೇವಸ್ಥಾನ ಉದ್ಘಾಟಿಸಿ ಮಾತನಾಡಿ,ನಾಗದೇವರ ಆಶೀರ್ವಾದ ನಿಮ್ಮೆಲ್ಲರ ಮೇಲೆ ಇರಲಿ ಎಂದು ಆಶಿಸಿದರು.ದುರ್ಗಾ ಕಾಲನಿ ಸುಧಾರಣೆ ಜತೆಗೆ ನಿವಾಸಿಗಳ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ಭರವಸೆ ನೀಡಿದರು.
ಇದನ್ನೂ ಓದಿ: ನೇಕಾರರಿಂದ ಪತ್ರ ಚಳವಳಿ
ದಲಿತ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಶರಣಪ್ಪ ಆಮದಿಹಾಳ,ಹುನಗುಂದ ಗೌರಿಶಂಕರ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷ ಯುವರಾಜ ಚಲವಾದಿ,ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಹಾಂತೇಶ ನರಗುಂದ,ನಗರಸಭೆ ಸದಸ್ಯ ಸುರೇಶ ಜಂಗ್ಲಿ,ಮೌಲೇಶ ಬಂಡಿವಡ್ಡರ,ಪತ್ರಕರ್ತ ಗುರು ಗಾಣಿಗೇರ,ಮುಖಂಡರಾದ ಹುಸೇನಸಾಬ ಕಂದಗಲ್ಲ,ನಬೀಸಾಬ ಮುಲ್ಲಾ,ಈರಪ್ಪ ಕಿರಗಿ,ಶ್ರೀನಿವಾಸ ಬಡಿಗೇರ ಇದ್ದರು.
ಬನ್ನಿಮಹಾಂಕಾಳಿ ಸಮಿತಿ ವತಿಯಿಂದ ಶಾಸಕ ವಿಜಯಾನಂದ ಕಾಶಪ್ಪನವರಿಗೆ ಸತ್ಕರಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುರೇಶ ದೊಡ್ಡಮನಿ ವಹಿಸಿದ್ದರು.ಆಕಾಶ ದೊಡ್ಡಮನಿ ಸ್ವಾಗತಿಸಿದರು.ಶರಣಪ್ಪ ಆಲೂರ ಪ್ರಾಸ್ತಾವಿಕವಾಗಿ ಮಾತನಾಡಿದರು.ಅನೀಲ ಚಲವಾದಿ ವಂದಿಸಿದರು.ರಾಮು ಮುದಗಲ್ಲ ನಿರೂಪಿಸಿದರು.